ADVERTISEMENT

ಹಾಸ್ಟೆಲ್ ಮೇಲ್ವಿಚಾರಕಿ ಪತಿಯಿಂದ ಕಿರುಕುಳ: ವಿದ್ಯಾರ್ಥಿನಿಯರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 15 ಮೇ 2019, 4:51 IST
Last Updated 15 ಮೇ 2019, 4:51 IST
   

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ನುಸ್ರತ್ ಕಾಲೋನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಪದವಿ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಧರಣಿ ಆರಂಭಿಸಿದ್ದಾರೆ.

ಹಾಸ್ಟೆಲ್ ಮೇಲ್ವಿಚಾರಕಿ ಲೀಲಾವತಿ ಅವರ ಪತಿ ಬಸವರಾಜ ಹತ್ತರಕಿ ಅವರು ಹೊತ್ತಿಲ್ಲದ ಹೊತ್ತಿನಲ್ಲಿ ಹಾಸ್ಟೆಲ್‌ಗೆ ಬಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿನಿಯರ ಆರೋಪ.

ಸಿಸಿಟಿವಿ ದೃಶ್ಯಾವಳಿಗಳನ್ನು ಅಗಾಗ ಬಂದು ಎಡಿಟ್ ಮಾಡಿಟ್ಟು ಹೋಗುತ್ತಾರೆ. ಹಾಸ್ಟೆಲ್‌ನಲ್ಲಿ ಕಳಪೆ ಆಹಾರ ಕೊಡಲಾಗುತ್ತಿದೆ ಎಂದು ಆರೋಪಿಸಿ ಅಹೋರಾತ್ರಿ ಹಾಸ್ಟೆಲ್ ಎದುರು ವಿದ್ಯಾರ್ಥಿನಿಯರು ಧರಣಿ ಆರಂಭಿಸಿದ್ದಾರೆ.

ADVERTISEMENT

ಮೇಲಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಪವಾಸ ನಿರಸನ ಆರಂಭಿಸಲಾಗುವುದು ಎಂದು ವಿದ್ಯಾರ್ಥಿನಿ ಯರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.