ADVERTISEMENT

ಖಬರಸ್ಥಾನ್ ಜಾಗವೆಂದು ಮಹಿಳಾ ಶೌಚಾಲಯ ನೆಲಸಮ: ಆರ್.‌ ಮಾನಸಯ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:51 IST
Last Updated 26 ಫೆಬ್ರುವರಿ 2026, 6:51 IST
ಕವಿತಾಳದಲ್ಲಿ ಸಾರ್ವಜನಿಕ ಶೌಚಾಲಯದ ಜಾಗದ ಸಮಸ್ಯೆ ಕುರಿತು ಹೋರಾಟಗಾರ ಆರ್.‌ ಮಾನಸಯ್ಯ ಸ್ಥಳೀಯರಿಂದ ಮಾಹಿತಿ ಪಡೆದರು
ಕವಿತಾಳದಲ್ಲಿ ಸಾರ್ವಜನಿಕ ಶೌಚಾಲಯದ ಜಾಗದ ಸಮಸ್ಯೆ ಕುರಿತು ಹೋರಾಟಗಾರ ಆರ್.‌ ಮಾನಸಯ್ಯ ಸ್ಥಳೀಯರಿಂದ ಮಾಹಿತಿ ಪಡೆದರು   

ಕವಿತಾಳ: ‘ಸಾರ್ವಜನಿಕ ಶೌಚಾಲಯದ ಸ್ಥಳ ವಿವಾದ ಕುರಿತು ಪರಿಹಾರ ಒದಗಿಸದ ಸ್ಥಳೀಯ ಆಡಳಿತದ ವಿರುದ್ದ ಹೋರಾಟ ನಡೆಸಬೇಕಾಗುತ್ತಿದೆ, ಮಹಿಳೆಯರು ಶೌಚಾಲಯ ಸಮಸ್ಯೆ ಎದುರಿಸುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಹೋರಾಟಗಾರ ಆರ್.‌ ಮಾನಸಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಖಬರಸ್ಥಾನಕ್ಕೆ ಸೇರಿದ ಜಾಗ ಎಂದು ಇಲ್ಲಿನ 10ನೇ ವಾರ್ಡ್‌ನಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಲಾಗಿದ್ದು 5 ವಾರ್ಡ್‌ನ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಮುಖ್ಯಾಧಿಕಾರಿ ಕ್ರಮ ಕೈಗೊಂಡಿಲ್ಲ. ಖಬರಸ್ಥಾನ ಮತ್ತು ಖಾಸಗಿ ವ್ಯಕ್ತಿಗೆ ಸೇರಿದ ಜಾಗ ಹೊರತು ಪಡಿಸಿ ಶೌಚಾಲಯ ನಿರ್ಮಿಸಿದ್ದ ಜಾಗ ಪ್ರತ್ಯೇಕವಾಗಿದೆ. ಈ ಬಗ್ಗೆ ದಾಖಲೆಗಳು ಲಭ್ಯವಿದ್ದು ಶೀಘ್ರ ಜಾಗದ ಸಮಸ್ಯೆಗೆ ಪರಿಹಾರ ಒದಿಗಸಬೇಕು’ ಎಂದು ಮುಖ್ಯಾಧಿಕಾರಿ ಜಸ್‌ ಪಾಲ್‌ ಸಿಂಗ್‌ ಅವರಿಗೆ ತಿಳಿಸಿದರು.

ಮುಖಂಡರಾದ ಕರಿಯಪ್ಪ ಅಡ್ಡೆ, ಅಯ್ಯಪ್ಪ ನಿಲೋಗಲ್‌, ಮೌನೇಶ ಹಿರೇಕುರಬರ, ಲಿಂಗಣ್ಣ ಯಡವಟ್‌, ತಿಪ್ಪಯ್ಯಸ್ವಾಮಿ, ಅಮರೇಶ ಕಟ್ಟಿಮನಿ, ಹುಚ್ಚಪ್ಪ ವಡವಟ್ಟಿ, ಲಾಳೇಶ ನಾಯಕ, ಗಂಗಪ್ಪ ಹಟ್ಟಿ, ಈರಪ್ಪ ಕುರಕುಂದಿ, ನಾಗರಾಜ ಯಾದವ, ಯಂಕೋಬ ಹಟ್ಟಿ, ಮಂಜು ಕರಿಗೋಡಿ, ಜಯಸಿಂಗ್, ಗಂಗಪ್ಪ ಹಡಪದ ಮತ್ತು ಮಹಿಳೆಯರು ಉಪಸ್ಥಿತರಿದ್ದರು.

ADVERTISEMENT
ಕವಿತಾಳ 10ನೇ ವಾರ್ಡಿಗೆ ಬುಧವಾರ ಭೇಟಿ ನೀಡಿದ ಹೋರಾಟಗಾರ ಆರ್.‌ ಮಾನಸಯ್ಯ ಅವರಿಗೆ ಶೌಚಾಲಯ ಸಮಸ್ಯೆ ಕುರಿತು ಮಹಿಳೆಯರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.