ADVERTISEMENT

ರಾಯಚೂರು ಜಿಲ್ಲಾ ಉತ್ಸವದಲ್ಲಿ ಇಂದು ವಿವಿಧ ಕಾರ್ಯಕ್ರಮ

ಕರ್ನಾಟಕ ಸಂಘದಿಂದ ಮೆರವಣಿಗೆ, ಬೈಕ್ ರ‍್ಯಾಲಿ, ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:51 IST
Last Updated 5 ಫೆಬ್ರುವರಿ 2026, 4:51 IST
ರಾಯಚೂರು ಉತ್ಸವ
ರಾಯಚೂರು ಉತ್ಸವ   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಫೆ.5ರಂದು ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ಸಂಘದ ಆವರಣದಿಂದ ಉತ್ಸವದ ಜಾಥಾ ಮತ್ತು ಬೈಕ್ ರ‍್ಯಾಲಿ ನಡೆಯಲಿದೆ. ಮೆರವಣಿಗೆಯು ಬಂಗಾರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ಸಂಚರಿಸಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ.

ವೀರಗಾಸೆ, ಹಗಲುವೇಷ, ಚಿಲಿಪಿಲಿ ಗೊಂಬೆ, ಕೀಲು ಕುದುರೆ, ಜಾಂಜಮೇಳ, ಹಗಲುವೇಷ, ಕಣಿ ಹಲಗೆ, ಡೊಳ್ಳು ಕುಣಿತ, ತಾಷಾರೊಂಡಾಲಾ, ಶಹನಾಯಿ ವಾದನ, ಲಂಬಾಣಿ ನೃತ್ಯ, ಕೊಂಬು ಕಹಳೆ, ಗೊರವ ಕುಣಿತ, ತಮಟೆ ವಾದನ, ನಾಸಿಕ ಡೊಳ್ಳು, ಮಹಿಳಾ ಡೊಳ್ಳು, ಕಹಳೆ ವಾದನ, ಸೋಮನ ಕುಣಿತ, ನಂದಿಧ್ವಜ ಮತ್ತು ಸಮಾಳ, ಭದ್ರಕಾಳಿ ಕುಣಿತ, ಸತ್ತೀಗೆ ಕುಣಿತ, ಜಗ್ಗಲಗಿ, ಕೋಳಿ ಕುಣಿತ, ಕರಡಿ ಮಜಲು ತಂಡಗಳ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿಡಿಮದ್ದು ಪ್ರದರ್ಶನ: ಸಂಜೆ 7ರಿಂದ ನೃತ್ಯ ಕಾರ್ಯಕ್ರಮ

ADVERTISEMENT

ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಫೆ.5ರಂದು ಸಂಜೆ 5.30ಕ್ಕೆ ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾವಾರು ಶ್ರೇಷ್ಠ ಕೃಷಿಕ, ಕೃಷಿಕ ಮಹಿಳೆ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ, ಪುರಸ್ಕೃತರ ಪರಿಚಯ, ಕೃಷಿ ತಾಂತ್ರಿಕತೆಗಳ ಕೈಪಿಡಿ, ಹಸ್ತ ಪ್ರತಿ ಪ್ರಕಟಣೆಗಳ ಬಿಡುಗಡೆ ನಡೆಯಲಿದೆ.

ಸಂಜೆ 6.55ಕ್ಕೆ ಸಿಡಿಮದ್ದು ಪ್ರದರ್ಶನ, ಸಂಜೆ 7 ಗಂಟೆಗೆ ಎಕ್ಸ್‌ಟೆಎಸ್‌ಸಿ ತಂಡದಿಂದ ನೃತ್ಯ ಕಾರ್ಯಕ್ರಮ, ಸಂಜೆ 7.15 ರಿಂದ 9.15 ರವರೆಗೆ ಸವಾರಿ ತಂಡದವರಿಂದ ಕಾರ್ಯಕ್ರಮ, ರಾತ್ರಿ 9.15ರಿಂದ 9.30 ರವರೆಗೆ ಎಕ್ಸ್‌ಟೆಎಸ್‌ಸಿ ತಂಡದಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 9.40 ರಿಂದ 11.00 ರವರೆಗೆ ಸಂಜಿತ್ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹಿಂದೂಸ್ತಾನಿ ಸಂಗೀತ, ನೃತ್ಯ: 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ಫೆ.5ರ ಸಂಜೆ 4 ಗಂಟೆಯಿಂದ 5.30ರವರೆಗೆ ಪಂಡಿತ ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೊನೆಟ್ ವಾದನ, ಶರಣಪ್ಪ ಗೋನಾಳ ಅವರಿಂದ ಜಾನಪದ ಗಾಯನ, ವಿರೂಪಾಕ್ಷ ವಂದಲಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗೂರೇಶ ಅಸ್ಕಿಹಾಳ ಅವರಿಂದ ಹಿಂದೂಸ್ತಾನಿ ಸಂಗೀತ, ನಬಿ ಬೇಗ್ ರಾಯಚೂರು ಅವರಿಂದ ಗಜಲ್, ಮುದ್ದುಮೋಹನ ರಾಯಚೂರು ಅವರಿಂದ ಹಿಂದೂಸ್ತಾನಿ ಸಂಗೀತ, ಶ್ರೇಯಸ್ ಜೋಷಿ ಅವರಿಂದ ಭರತನಾಟ್ಯ, ಗೋಪಾಲ ಗುಡಿಬಂಡಿ ರಾಯಚೂರು ಅವರಿಂದ ತಬಲಾ ವಾದನ, ವಿಷ್ಣು ದೇಸಾಯಿ ಅವರಿಂದ ಏಕಪಾತ್ರಭಿನಯ, ಶಾಂತಾ ಕುಲಕರ್ಣಿ ಶಕ್ತಿನಗರ ಅವರಿಂದ ಜಾನಪದ ಸಂಗೀತ ನಡೆಯಲಿವೆ.

ಕವಿಗೋಷ್ಠಿ, ವಿಚಾರಗೋಷ್ಠಿ: ಫೆಬ್ರುವರಿ 5ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ನಗರದ ಜಿಲ್ಲಾ ಕಾರಾಗೃಹದ ಹತ್ತಿರದ ಮಹಿಳಾ ಸಮಾಜದ ಆವರಣದಲ್ಲಿ ಗೋಷ್ಠಿಗಳು ನಡೆಯಲಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಉದ್ಘಾಟಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಸಾಲಿ ಆಶಯ ನುಡಿಗಳನ್ನಾಡುವರು. ಲಿಂಗಸುಗೂರಿನ ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ, ಸಾಹಿತಿ ಬಿ.ಜಿ.ಹುಲಿ, ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಿಜಯ ರಾಜೇಂದ್ರ, ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಫ್.ಮಸ್ಕಿ ಭಾಗಿಯಾಗಲಿದ್ದಾರೆ.

ನಾಟಕ ಪ್ರದರ್ಶನ:

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಫೆ.5ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 11ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಅಲ್ತಾಪ್ ರಂಗ ಮಿತ್ರ, ಪ್ರವೀಣ ರೆಡ್ಡಿ ಗುಂಜಹಳ್ಳಿ, ಲಕ್ಷ್ಮಣ ಮಂಡಲಗೇರಾ, ಹನುಮಂತಪ್ಪ ಜಾಲಿಬೆಂಚಿ, ಉರುಕುಂದಪ್ಪ, ಈರಣ್ಣ ಸೇನನಪಲ್ಲಿ, ಅಣ ವೀರಯ್ಯ, ದೇವಣ್ಣ ಎಲೆಬಿಚ್ಚಾಲಿ, ವೆಂಕಟ ನರಸಿಂಹಲು, ರಂಗಚೇತನ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ನಾಟಕ ಪ್ರದರ್ಶಿಸುವರು.

ರಂಗಸ್ವಾಮಿ ರಾಯಚೂರು ಅವರಿಂದ ಬಯಲಾಟ, ವಿ.ಎನ್.ಅಕ್ಕಿ ಅವರು ಸಮುದಾಯ ಗೀತೆ ಪ್ರಸ್ತುತ ಪಡಿಸಲಿದ್ದಾರೆ.

ಸಾಹಿತ್ಯ–ಸಂಸ್ಕೃತಿ ಗೋಷ್ಠಿ: 

ಫೆಬ್ರವರಿ 5ರಂದು ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ನಡೆಯುವ ಸಾಹಿತ್ಯ–ಸಂಸ್ಕೃತಿ ಗೋಷ್ಠಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಉದ್ಘಾಟಿಸುವರು.

ಹಿರಿಯ ಸಾಹಿತಿ ವೀರಹನುಮಾನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಅಮರೇಶ ಬಿರಾದಾರ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಸ್ಕಿ ನಾಗರಾಜ ಉಪಸ್ಥಿತರಿರುವರು.

ರಾಯಚೂರು ಜಿಲ್ಲೆಯ ಇತಿಹಾಸದ ಕುರಿತು ಹಂಪಿ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಅಮರೇಶ ಯತಗಲ್ ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ಸಾಹಿತ್ಯದ ಹಿರಿಮೆ ಕುರಿತು ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಉಪನ್ಯಾಸ ನೀಡುವರು.

ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯದ ಕುರಿತು ಹಿರಿಯ ಮಕ್ಕಳ ಸಾಹಿತಿ ಭಾರ್ಗವಿ ದೇಸಾಯಿ ಅವರು ಉಪನ್ಯಾಸ ನೀಡುವರು.

ಉರ್ದು ಮುಷಾಯಿರಾ ಕಾರ್ಯಕ್ರಮ: 

ಫೆ.5ರಂದು ರಾತ್ರಿ 9 ರಿಂದ ಉರ್ದು ಮುಷಾಯಿರಾ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಉರ್ದು ಕವಿ ವಹೀದ್ ವಾಹೀದ್ ಅಧ್ಯಕ್ಷತೆ ವಹಿಸುವರು. ಕವಿ ಇಫ್ತಿಕಾರ್ ಶಕೀಲ್ ನಿರ್ವಹಣೆ ಮಾಡುವರು. ಕವಿ ಆರೀಫ್ ರಾಜಾ ಅಶಯ ನುಡಿಗಳನ್ನಾಡುವರು.

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದಾರ ಹಾಗೂ ಹಿರಿಯ ಸಾಹಿತಿ ವೀರ ಹನುಮಾನ ಉಪಸ್ಥಿತರಿರುವರು.

ಉರ್ದು ಕವಿಗಳಾದ ನುಸ್ರತ್ ಮೆಹದಿ, ಬೊಪಾಲ್, ಸರ್ದಾರ್ ಸಲೀಂ, ಮೆಹಕ್ ಕೆರಾನ್ವಿ, ಇರ್ಫಾನ್ ರಾಯಚೂರು, ಮಿಸ್ಕಿನ್ ರಾಯಚೂರು, ಜಿಶಾನ್ ಶಾದ್, ಹರ್ಷದ್ ನದೀಂ ದೆಹಲಿ, ಶಫೀಕ್ ಅಬಿದಿ, ಬೆಂಗಳೂರು, ಸುಂದರ್ ಮಾಲೆಗಾನ್ವಿ, ಅಖಿಲ್ ಯಾವರ್, ವಹಾಬ್ ಆಜಾದ್, ಶೋಯೇಬ್ ಮದ್ನಿ, ಜಾವಿದ್ ಫೆರೋಜಾಖಾದಿ, ಯು.ಪಿ., ಜಮೀಲ್ ಬನಾರಸಿ, ಯು.ಪಿ., ಡಾ.ಇಪ್ತಿಕಾರ್ ಶಕೀಲ್, ಇಂಡಿಯನ್ ಬಾಷಾ, ತಯ್ಯಬ್ ಖಾದ್ರಿ, ಜಹೀರುದ್ದೀನ್ ಅವರು ಈ ಉರ್ದು ಮುಷಾಯಿರಾ ನಡೆಸಿಕೊಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವೇದಿಕೆ–2ರಲ್ಲಿ ಫೆ.5ರ ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಶಶಿಧರ ವಂದಲಿ ಅವರಿಂದ ವಚನ ಗಾಯನ ಅಮರೇಶ ಸಾಲಿಮಠ ಅವರಿಂದ ಸುಗಮ ಸಂಗೀತ ಶಾಂತಾ ಬಲ್ಲಟಗಿ ಅವರಿಂದ ಸುಗಮ ಸಂಗೀತ ವಸುಂಧರ.ವಿ ಹೊಸಪೇಟೆ ಅವರು ಭರತನಾಟ್ಯ ಪ್ರದರ್ಶಿಸಲಿದ್ದಾರೆ. ರಮೇಶ ಹಸಮಕಲ್ ಅವರಿಂದ ಸುಗಮ ಸಂಗೀತ ಮಲ್ಲಣ್ಣ ಹರವಾಳ ಅವರಿಂದ ಜಾನಪದ ಗಾಯನ ಸಂಗನಗೌಡ ಅವರಿಂದ ಹಂತಿ ಪದಗಳು ಜಾವೀದ್ ಅವರಿಂದ ಗಜಲ್ ಗುಲಾಮ್ ಹೈದರ್ ಅವರಿಂದ ಗಜಲ್ ಅನ್ವರಿ ಅವರಿಂದ ಕವಾಲಿ ಸುಭಾಷ್ ಅಸ್ಕಿಹಾಳ ಅವರು ತತ್ವಪದಗಳನ್ನು ಹಾಡಲಿದ್ದಾರೆ.

ಪ್ರೇಕ್ಷಾಗೃಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯವರೆಗೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11 ಗಂಟೆಗೆ ಬೂದಯ್ಯ ಯಾದಗಿರಿ ಅವರಿಂದ ಸುಗಮ ಸಂಗೀತ ಯಂಕನಗೌಡ ದಿದ್ದಿಗಿ ಅವರಿಂದ ಭಕ್ತಿಗೀತೆ ಅಲ್ಲಾಭಕ್ಷಿ ಸಿಂಧನೂರು ಅವರಿಂದ ಜನಪದ ಗಾಯನ ಬಸವರಾಜ ದಿನ್ನಿ ಅವರಿಂದ ದಾಸರ ಪದಗಳು ಚೈತ್ರಮ್ಮ ಮಾಟುರ ಅವರಿಂದ ಸಂಪ್ರದಾಯ ಪದಗಳು ಜಯಸಿಂಹ ಪೇರೂರ ಅವರಿಂದ ಸಂಗೀತ ಗಾಯನ ಸುಜಾತ ಜೋಷಿ ಅವರಿಂದ ದಾಸವಾಣಿ ಶ್ರೀನಿವಾಸ ಸಿಗ್ನೆಚರ್ ಡ್ಯಾನ್ಸ್ ಗ್ರೂಪ್ ರಾಯಚೂರು ಅವರಿಂದ ಸಮೂಹ ನೃತ್ಯ ಬಸಮ್ಮ ಜಾಲಿಹಾಳ ಅವರಿಂದ ಪಾರಿಜಾತ ಭಜನೆ ಸಂಗೀತ ಶರಣಮ್ಮ ಉಪಲದೊಡ್ಡಿ ಅವರಿಂದ ಸಂಪ್ರದಾಯ ಪದಗಳು ಹನುಮಮ್ಮ ಬಸಪೂರ ಕೆ. ರಾಯಚೂರು ಅವರಿಂದ ಸೋಬಾನೆ ಪದಗಳು ವಿಶ್ವನಾಥ ರಾಯಚೂರು ಅವರಿಂದ ಜನಪದ ಗೀತೆ ನಟರಾಜ ರಾಯಚೂರು ಅವರಿಂದ ಸ್ಯಾಕ್ಸೊಪೋನ್ ದೇವರಾಜ ಡಿ. ಅವರಿಂದ ಕಥಾ ಕೀರ್ಥನ ಲಕ್ಷ್ಮಣ ಕೊಪ್ಪರ ಅವರಿಂದ ಭಕ್ತಿಗೀತೆ ನರಸಿಂಹಲು ಮರ್ಚೆಡ್ ಅವರಿಂದ ಹಂತಿ ಪದಗಳು ಅಕ್ಷಯ ಜೋಶಿ ಲಿಂಗಸೂಗೂರು ಅವರಿಂದ ತಬಲಾ ಪ್ರಭಾ ಕೆ.ಕಂಬಾರ ಅವರಿಂದ ಸುಗಮ ಸಂಗೀತ ಅನ್ನಪೂರ್ಣಬಾಯಿ ರಾಯಚೂರು ಅವರಿಂದ ಭಕ್ತಿಗೀತೆಗಳು ನಡೆಯಲಿವೆ.

ವಚನ ದಲಿತ ಬಂಡಾಯ ಸಾಹಿತ್ಯಗೋಷ್ಠಿ ಫೆ. 5ರಂದು

ಮಧ್ಯಾಹ್ನ 4ರಿಂದ 5.30ರವರೆಗೆ ನಡೆಯುವ ವಚನ ದಲಿತ ಬಂಡಾಯ ಸಾಹಿತ್ಯಗೋಷ್ಠಿಯನ್ನು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಭಗತರಾಜ್ ನಿಜಾಮಕಾರಿ ಆಶಯ ನುಡಿ ಆಡುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಅಮರೇಶ ನುಗಡೋಣಿ ಬಂಡಾಯ ಸಾಹಿತಿ ಸಿ.ದಾನಪ್ಪ ಕಸಾಪ ಸಿರವಾರ ತಾಲ್ಲೂಕು ಘಟಕದ ಅಧ್ಯಕ್ಷ ಮೌನೇಶ ಹಣಗಿ ಕಸಾಪ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ವಿದ್ಯಾವತಿ ವಣಕಿ ಉಪಸ್ಥಿತರಿರುವರು. ರಾಯಚೂರು ಜಿಲ್ಲೆಯಲ್ಲಿ ವಚನ ಸಾಹಿತ್ಯದ ಕುರಿತು ಲೇಖಕಿ ಸರ್ವಮಂಗಳ ಸಕ್ರಿ ಅವರು ಉಪನ್ಯಾಸ ನೀಡುವರು. ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯದ ಕುರಿತು ಮಾನವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜೆ.ಎಲ್.ಈರಣ್ಣ ಉಪನ್ಯಾಸ ನೀಡುವರು. ಜಿಲ್ಲೆಯ ಬಂಡಾಯ ಸಾಹಿತ್ಯದ ಕುರಿತು ಸಾಹಿತಿ ದಸ್ತಗೀರಸಾಬ ದಿನ್ನಿ ವಿಶೇಷ ಉಪನ್ಯಾಸ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.