ADVERTISEMENT

ರಾಯಚೂರು: ಕ್ರೀಡಾಕೂಟ ನೋಂದಣಿಗೆ ಡಿ.31 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 7:05 IST
Last Updated 28 ಡಿಸೆಂಬರ್ 2025, 7:05 IST
<div class="paragraphs"><p>- ಪ್ರಜಾವಾಣಿ ಚಿತ್ರ</p></div>
   

- ಪ್ರಜಾವಾಣಿ ಚಿತ್ರ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ 2025-26ನೇ ಸಾಲಿನ ರಾಯಚೂರು ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜ.8 ಹಾಗೂ 9ರ ಬೆಳಿಗ್ಗೆ 10 ಗಂಟೆಗೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಭಾಗವಹಿಸಿಸುವವರು ಡಿ.31ರೊಳಗಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಜಿಲ್ಲೆಯ ಸರ್ಕಾರಿ ನೌಕರರು https://form.svhrt.com/6931869b0a0bd8c6f89eda9f ಲಿಂಕ್ ಬಳಸಿ ನೋಂದಣಿ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಕ್ರೀಡಾ ತರಬೇತುದಾರರು, ಆರು ತಿಂಗಳೊಳಗಾಗಿ ನೇಮಕಗೊಂಡವರು, ತಾತ್ಕಾಲಿಕವಾಗಿ ನೇಮಕಗೊಂಡವರು, ಪ್ಯಾರಾ ಮಿಲಿಟರಿ, ಪೊಲೀಸ್, ಸಿಆರ್‌ಪಿಎಫ್, ಅಗ್ನಿಶಾಮಕ ದಳ ಮೊದಲಾದ ಸಮವಸ್ತ್ರಧಾರಿತ ಸಿಬ್ಬಂದಿ ಭಾಗವಹಿಸಲು ಅವಕಾಶವಿರುವುದಿಲ್ಲ.

ADVERTISEMENT

ಎಲ್ಲಾ ಕಾಯಂ ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಕಚೇರಿ ಮುಖ್ಯಸ್ಥರ ಸಹಿ ಇರುವ ಗುರುತು ಪತ್ರವನ್ನು (ಭಾವಚಿತ್ರ ಸಹಿತ) ಕಡ್ಡಾಯವಾಗಿ ಕ್ರೀಡಾಕೂಟದಲ್ಲಿ ಹಾಜರುಪಡಿಸಬೇಕು. ಒಬ್ಬ ನೌಕರ ಕ್ರೀಡಾಪಟು ಒಟ್ಟು 3 ಆಟಗಳಲ್ಲಿ ಮಾತ್ರ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ರಾಯಚೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.