ADVERTISEMENT

ರಾಯಚೂರು: ಯುದ್ದ ನಿಲ್ಲಿಸುವಂತೆ ಮಕ್ಕಳಿಂದ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 13:04 IST
Last Updated 1 ಮಾರ್ಚ್ 2022, 13:04 IST
ರಾಯಚೂರು ನಗರದ ಎನ್‌ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಮಹಾಶಿವರಾತ್ರಿ ದಿನದಂದು ಮಂಗಳವಾರ, ಉಕ್ರೇನ್‌–ರಷ್ಯಾ ನಡುವಿನ ಯುದ್ಧ ನಿಲ್ಲಿಸುವಂತೆ ದೇವರ ಬಳಿ ಫಲಕಗಳನ್ನು ಪ್ರದರ್ಶಿಸಿ, ಪ್ರಾರ್ಥಿಸಿ ಗಮನ ಸೆಳೆದರು
ರಾಯಚೂರು ನಗರದ ಎನ್‌ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಮಹಾಶಿವರಾತ್ರಿ ದಿನದಂದು ಮಂಗಳವಾರ, ಉಕ್ರೇನ್‌–ರಷ್ಯಾ ನಡುವಿನ ಯುದ್ಧ ನಿಲ್ಲಿಸುವಂತೆ ದೇವರ ಬಳಿ ಫಲಕಗಳನ್ನು ಪ್ರದರ್ಶಿಸಿ, ಪ್ರಾರ್ಥಿಸಿ ಗಮನ ಸೆಳೆದರು   

ರಾಯಚೂರು: ನಗರದ ಎನ್‌ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಮಹಾಶಿವರಾತ್ರಿ ದಿನದಂದು ಮಂಗಳವಾರ ದೇವರನ್ನು ಪ್ರಾರ್ಥಿಸಿ, ರಷ್ಯಾ ಹಾಗೂ ಉಕ್ರೇನ್ ದೇಶಗಳು ಯುದ್ಧ ನಿಂತುಹೋಗಲಿ ಎಂದು ಕೋರಿದರು.

ರಷ್ಯಾ ಅಧ್ಯಕ್ಷರಿಗೆ ಶಿವನು ಒಳ್ಳೆಯ ಬುದ್ದಿ ಕೊಡಲಿ. ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲಸುವಂತಾಗಲಿ ಎಂದು ಘೋಷಣಾ ಫಲಕಗಳನ್ನು ಹಿಡಿದು ಗಮನ ಸೆಳೆದರು.

ಶಿವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ಮಹಾರುದ್ರ ಅಭಿಷೇಕ, ಗಂಧ ಲೇಪನ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ADVERTISEMENT

ಮುಂದಿನ ದಿನಗಳಲ್ಲಿ ಯಾವ ರಾಷ್ಟ್ರಗಳು ಯುದ್ದ ಮಾಡದಂತೆ ಎಲ್ಲರಿಗೂ ಒಳ್ಳೆಯ ಬುದ್ದಿ ನೀಡಲಿ ಎಂದೂ ಮಕ್ಕಳು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.