ADVERTISEMENT

ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:56 IST
Last Updated 6 ಮಾರ್ಚ್ 2025, 15:56 IST
ಲಿಂಗಸುಗೂರು ಪಟ್ಟಣದ ಕೋಚಿಂಗ್ ಸೆಂಟರ್ ಮೇಲೆ ಬಿಇಒ ಹುಂಬಣ್ಣ ರಾಠೋಡ ದಾಳಿ ನಡೆಸಿದರು
ಲಿಂಗಸುಗೂರು ಪಟ್ಟಣದ ಕೋಚಿಂಗ್ ಸೆಂಟರ್ ಮೇಲೆ ಬಿಇಒ ಹುಂಬಣ್ಣ ರಾಠೋಡ ದಾಳಿ ನಡೆಸಿದರು   

ಲಿಂಗಸುಗೂರು: ಪಟ್ಟಣದಲ್ಲಿ ನವೋದಯ, ಸೈನಿಕ ಶಾಲೆ ಸೇರಿ ಇತರೆ ವಸತಿ ಶಾಲೆಗಳಿಗೆ ತರಬೇತಿ ನೀಡುವ  ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ನೇತ್ರತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದೆ.

ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ತಾಲ್ಲೂಕಿನಾದ್ಯಂತ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ತಲೆಎತ್ತಿದ್ದು, ಇಂತಹ ಕೇಂದ್ರಗಳನ್ನು ಮುಚ್ಚಿಸಲು ಹಾಗೂ  ಪರವಾನಗಿ ಪಡೆದು ಶಾಲೆ ನಡೆಸದೇ ಅನಧಿಕೃತವಾಗಿ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ ತಿಳಿಸಿದರು.

ಲಿಂಗಸುಗೂರು ಹಾಗೂ ಮಸ್ಕಿ ತಾಲ್ಲೂಕಿನಲ್ಲಿ 35 ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ದಾಳಿ ಮಾಡಲಾಗಿದೆ. ಕೋಚಿಂಗ್ ಸೆಂಟರ್ ಮುಚ್ಚುವಂತೆ ಅಲ್ಲಿನ ಮುಖ್ಯಸ್ಥರಿಂದ ಮುಚ್ಚಳಕೆ ಪಡೆಯಲಾಗಿದೆ. ಬೇಸಿಗೆ ರಜೆಯಲ್ಲಿ ಹೆಚ್ಚಾಗುವ ಅನಧಿಕೃತ ಸೆಂಟರ್‌ಗಳಿಗೆ ಸಂಪೂರ್ಣ ಡಿವಾಣ ಹಾಕುವ ಯತ್ನ ಮಾಡಲಾಗಿದೆ ಎಂದು ಬಿಇಒ ಹುಂಬಣ್ಣ ರಾಠೋಡ ತಿಳಿಸಿದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.