ADVERTISEMENT

ಹಟ್ಟಿ: ಸೋರುತ್ತಿದೆ ಇಂದಿರಾ ಕ್ಯಾಂಟಿನ್

 ಉದ್ಘಾಟನೆಯಾಗಿ 15 ದಿನದಲ್ಲೇ ಗೊಡೆಯಲ್ಲಿ ಬಿರುಕು 

ಅಮರೇಶ ನಾಯಕ
Published 15 ಜೂನ್ 2025, 6:22 IST
Last Updated 15 ಜೂನ್ 2025, 6:22 IST
ಹಟ್ಟಿ ಪಟ್ಟಣದ ಸಂತೆ ಬಜಾರ್ ಹತ್ತಿರದ‌ ಇಂದಿರಾ ಕ್ಯಾಂಟಿನ್‌ನಲ್ಲಿ ನಿರ್ಮಾಣ ಮಾಡಿದ ಕುಡಿಯುವ ನೀರಿನ ಟ್ಯಾಂಕ್ ಸೋರುತ್ತಿರುವುದು
ಹಟ್ಟಿ ಪಟ್ಟಣದ ಸಂತೆ ಬಜಾರ್ ಹತ್ತಿರದ‌ ಇಂದಿರಾ ಕ್ಯಾಂಟಿನ್‌ನಲ್ಲಿ ನಿರ್ಮಾಣ ಮಾಡಿದ ಕುಡಿಯುವ ನೀರಿನ ಟ್ಯಾಂಕ್ ಸೋರುತ್ತಿರುವುದು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸಂತೆ ಬಜಾರ್ ಬಳಿಯ ಇಂದಿರಾ ಕ್ಯಾಂಟಿನ್ ಕಟ್ಟಡದ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು ಸೋರುತ್ತಿದೆ.

ಮೇ17 ರಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟನೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಕಟ್ಟಡ ಸೋರುತ್ತಿದೆ.

ಕುಡಿಯುವ ನೀರಿನ ಟ್ಯಾಂಕ್‌ ಅಳವಡಿಸಿ ಪೈಪ್ ಸರಿಯಾಗಿ ಅಳವಡಿಸದೆ ಬಿಡಲಾಗಿದೆ. ಅದೇ ಪೈಪ್‌ಲೈನ್ ಮೂಲಕ ನೀರು ಸೋರಿ ಅಡುಗೆ ಕೋಣೆ, ಉಪಾಹಾರ ನೀಡುವ ಸ್ಧಳದಲ್ಲಿ ಸೋರುತ್ತಿದೆ. ನೀರು ನಿಂತ ಜಾಗದಲ್ಲೇ ಜನ ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‌‌‌‘ಉದ್ಘಾಟನೆಯಾಗಿ 15 ದಿನ ಕಳೆಯುವ ಮುನ್ನವೇ ಇಂದಿರಾ ಕ್ಯಾಂಟಿನ್ ಸೋರುತ್ತಿದ್ದು. ಗುತ್ತಿಗೆದಾರ ಕಳಪೆ ಮಟ್ಟದಲ್ಲಿ ನಿರ್ಮಾಣ ಮಾಡಿದ್ದಾನೆ. ಸರ್ಕಾರದ ನಿಯಮ ಪಾಲನೆ ಮಾಡಬೇಕಾದ ಗುತ್ತಿಗೆದಾರ ತರಾತುರಿಯಲ್ಲಿ ನಿರ್ಮಾಣ ಮಾಡಿದ್ದಕ್ಕೆ‌ ಇಂದಿರಾ ಕ್ಯಾಂಟಿನ್ ಸೋರುತ್ತಿದೆ. ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಟ್ಯಾಂಕರ್ ಪೈಪ್‌ಲೈನ್ ಮಾಡಲಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

‘ಮಳೆ ಬಂದಾರ ರಸ್ತೆಯಲ್ಲಿ ಹರಿಯುವ ನೀರು ಕ್ಯಾಂಟಿನ್ ಒಳಗೇ ಬರುತ್ತದೆ. ಚರಂಡಿ ನೀರು, ನಿಂತ ನೀರಿನಿಂದ ಇಂದಿರಾ ಕ್ಯಾಂಟಿನ್ ಗಬ್ಬೆದ್ದು ನಾರುತ್ತಿದೆ. ನಿತ್ಯ ಸ್ವಚ್ಛ ಮಾಡಿದರೂ ಅದೇ ರಾಗ ಅದೇ  ಹಾಡು ಎನ್ನುವಂತಾಗಿದೆ ಇಂದಿರಾ ಕ್ಯಾಂಟಿನ್ ಪರಿಸ್ಧಿತಿ’ ಎನ್ನುವುದು ಸ್ರೆೀಯರ ಮಾಉ.

ಸಮಸ್ಯೆ ಬಗ್ಗೆ ಇಲ್ಲಿನ ಸಿಬ್ಬಂದಿ ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

ಸಂಬಂದಪಟ್ಟ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‌ನಲ್ಲಿ ಇರುವ ಸಮಸ್ಯೆ ಬಗೆಹರಿಸಿ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹ. 

ಇಂದಿರಾ ಕ್ಯಾಂಟಿನ್‌ ಕಟ್ಟಡ ಗುತ್ತಿಗೆದಾರನಿಗೆ ಸಮಸ್ಯೆ ಬಗ್ಗೆ ಸರಿಪಡಿಸಿ ಎಂದು ತಿಳಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ.
– ಜಗನ್ನಾಥ, ಪ.ಪಂ ಮುಖ್ಯಾಧಿಕಾರಿ ಹಟ್ಟಿ
ಮಳೆಗಾಲದಲ್ಲಿ ಇಂದಿರಾ ಕ್ಯಾಂಟಿನ್ ಸೋರುತ್ತಿದ್ದು ಸಂಬಂದಪಟ್ಟವರು ಇತ್ತ ಕಡೆ ಗಮನಹರಿಸಿ ಸಮಸ್ಯೆ ಬಗೆ ಹರಿಸಲಿ.
– ಬುಜ್ಜ ನಾಯಕ ಹಟ್ಟಿ, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.