ADVERTISEMENT

ಶೋಷಿತರ ಧ್ವನಿ ಎನ್.ಶಿವಣ್ಣ: ಬಾಷುಮಿಯಾ

​ಪ್ರಜಾವಾಣಿ ವಾರ್ತೆ
Published 21 ಮೇ 2022, 4:47 IST
Last Updated 21 ಮೇ 2022, 4:47 IST
ಸಿಂಧನೂರಿನ ಎಪಿಎಂಸಿ ಆವರಣದಲ್ಲಿ ಕಾರ್ಮಿಕ ಮುಖಂಡರಾದ ಎನ್.ಶಿವಣ್ಣ ಮತ್ತು ರೀನಾ ಬನ್ಸೋಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು
ಸಿಂಧನೂರಿನ ಎಪಿಎಂಸಿ ಆವರಣದಲ್ಲಿ ಕಾರ್ಮಿಕ ಮುಖಂಡರಾದ ಎನ್.ಶಿವಣ್ಣ ಮತ್ತು ರೀನಾ ಬನ್ಸೋಡಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು   

ಸಿಂಧನೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎನ್.ಶಿವಣ್ಣ ಅವರು ಕಳೆದ ನಾಲ್ಕು ದಶಕಗಳಿಂದ ಎಐಟಿಯುಸಿಐ ಮತ್ತು ಭಾರತ ಕಮ್ಯುನಿಷ್ಟ್ ಪಕ್ಷದ ಮುಖಂಡರಾಗಿ ಅತ್ಯಂತ ಸರಳ ವ್ಯಕ್ತಿತ್ವದ ನಾಯಕರಾಗಿ ಶ್ರಮಿಕ ವರ್ಗದ ಧ್ವನಿಯಾಗಿದ್ದರು ಎಂದು ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಗನವಾಡಿ ಫೆಡರೇಶನ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎನ್.ಶಿವಣ್ಣ ಮತ್ತು ಸಿಪಿಐಎಂಎಲ್ ರೆಡ್‍ಫ್ಲ್ಯಾಗ್ ಮುಖಂಡರಾದ ರೀನಾ ಬನ್ಸೋಡಿ ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಣ್ಣ ಅಧಿಕ ಮತಗಳನ್ನು ಗಳಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಅವರ ಪರಾಭವಕ್ಕೆ ಕಾರಣರಾಗಿದ್ದರು. ಬದುಕಿನಲ್ಲಿ ಅತ್ಯಂತ ಶಿಸ್ತನ್ನು ಅಳವಡಿಸಿಕೊಂಡಿದ್ದ ಅವರು ಹಲವಾರು ವಿಷಯಗಳಲ್ಲಿ ಪರಿಣಿತಿಯನ್ನು ಪಡೆದ ವಿದ್ವಾಂಸರೂ ಆಗಿದ್ದರು ಎಂದರು.

ADVERTISEMENT

ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಕಾರ್ಯದರ್ಶಿ ನಾಗರಾಜ ಪೂಜಾರ, ಸಿಪಿಐಎಂಎಲ್ ರೆಡ್‍ಫ್ಲಾಗ್ ಮುಖಂಡ ಬಸವರಾಜ ಎಕ್ಕಿ, ಎಐಟಿಯುಸಿ ತಾಲ್ಲೂಕು ಘಟಕದ ಅಧ್ಯಕ್ಷೆ ಸುನೀತಾ, ಅಂಗನವಾಡಿ ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಚ್.ಕಂಬಳಿ, ಸದಸ್ಯರಾದ ಲಕ್ಷ್ಮಿ ದಢೇಸುಗೂರು, ಸಾವಿತ್ರಿ ಎಲೆಕೂಡ್ಲಿಗಿ ಕ್ಯಾಂಪ್ ಇದ್ದರು. ತಿಪ್ಪಯ್ಯ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.