ADVERTISEMENT

ಸಿಂಧನೂರು| ಶಿಕ್ಷಣದೊಂದಿಗೆ ಸಂಸ್ಕಾರ ಕಲಿಯಲು ಪವನ್ ಕುಮಾರ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:17 IST
Last Updated 11 ಫೆಬ್ರುವರಿ 2026, 7:17 IST
ಸಿಂಧನೂರು ತಾಲ್ಲೂಕಿನ ಜಾಲಿಹಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಮಂಗಳವಾರ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಂಗಾವತಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪವನ್ ಕುಮಾರ ಉದ್ಘಾಟಿಸಿದರು
ಸಿಂಧನೂರು ತಾಲ್ಲೂಕಿನ ಜಾಲಿಹಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಮಂಗಳವಾರ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಂಗಾವತಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪವನ್ ಕುಮಾರ ಉದ್ಘಾಟಿಸಿದರು   

ಸಿಂಧನೂರು: ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯುವುದೂ ಅವಶ್ಯವಾಗಿದೆ’ ಎಂದು ಗಂಗಾವತಿ ಪದವಿ ಕಾಲೇಜಿನ ಪ್ರಾಧ್ಯಾಪಕ ಪವನ್ ಕುಮಾರ ಸಲಹೆ ನೀಡಿದರು.

ತಾಲ್ಲೂಕಿನ ಜಾಲಿಹಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ವಿದ್ಯಾರ್ಥಿಗಳ ಪಾಲಕರಿಗೆ ಪಾದಪೂಜೆ ಮಾಡಿ ಗೌರವಿಸಲಾಯಿತು.

ADVERTISEMENT

ವಸತಿ ನಿಲಯದ ಪ್ರಾಂಶುಪಾಲ ಬಸವರಾಜ, ಮುಖಂಡರಾದ ನಿಂಗಪ್ಪ ಗುಡೂರು, ಯಂಕಪ್ಪ ಕಟ್ಟಿಮನಿ, ಶಿಕ್ಷಣ ಪ್ರೇಮಿ ಎಚ್. ಪಂಪಾರೆಡ್ಡಿ, ಪ್ರಾಚಾರ್ಯರಾದ ಕಾಳಿಂಗಪ್ಪ, ಗುರುಪಾದೆಪ್ಪ, ಮಾಳಪ್ಪ ಎಚ್., ಎಂ.ಸುರೇಶ, ಗ್ರಂಥಪಾಲಕ ಎಸ್.ನಾಗರಾಜ, ಅರುಣಕುಮಾರ, ಛಲವಯ್ಯ ಉಪಸ್ಥಿತರಿದ್ದರು.

ಶಿಕ್ಷಕಿ ಪುಷ್ಪಾಜಂಲಿ, ಅರುಣಕುಮಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.