
ಅಪಘಾತ ದೃಶ್ಯ
ಸಿಂಧನೂರು (ರಾಯಚೂರು ಜಿಲ್ಲೆ): ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಾರಿ ಕ್ರಾಸ್ ಬಳಿ ಬೊಲೆರೊ ವಾಹನಗಳು ಮುಖಾಮುಖಿಯಾಗಿ 7 ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಿಂಧನೂರು ಕಡೆಯಿಂದ ಸಿರುಗುಪ್ಪ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನವು, ಕುರಿಗಳನ್ನು ತುಂಬಿಕೊಂಡು ಹೋಗುತ್ತಿತ್ತು.
ಸಿರುಗುಪ್ಪದಿಂದ ಸಿಂಧನೂರು ಕಡೆಗೆ ಬರುತ್ತಿದ್ದ ವಾಹನದಲ್ಲಿ ಪ್ರಯಾಣಿಕರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿರಗುಪ್ಪ ತಾಲ್ಲೂಕಿನ ಚಳ್ಳೆಕಡ್ಲೂರು ಗ್ರಾಮದ ನಿವಾಸಿಗಳಾದ ಸಣ್ಣಯಲ್ಲಯ್ಯ (40), ರಂಗನಾಥ ಕಲ್ಲೂರು (15), ಹರಿ (36), ಆಂಧ್ರಪ್ರದೇಶದ ಆದೋನಿ ತಾಲ್ಲೂಕಿನ ಮಲ್ಲಯ್ಯ ಮದುರಿ ಸೇರಿ ಐವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸೇರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.