
ರಾಯಚೂರು: ಟ್ರ್ಯಾಕ್ಟರ್‌ನಲ್ಲಿ ಜೋಳದ ಒಣಮೇವು ಸಾಗಿಸುವಾಗ ವಿದ್ಯುತ್ ತಂತಿಗಳು ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟ ಘಟನೆ ನಗರದ ಆಶಾಪೂರ ಮಾರ್ಗದಲ್ಲಿ ನಡೆದಿದೆ.
ಬೆಂಕಿ ಸ್ಪರ್ಶವಾಗುತ್ತಿದ್ದಂತೆ ಮೇವನ್ನು ರಸ್ತೆಯುದ್ದಕ್ಕೂ ಡಂಪ್ ಮಾಡಿ ಟ್ರ್ಯಾಕ್ಟರ್ ಹೊರತೆಗೆದುಕೊಳ್ಳಲಾಗಿದೆ. ಅರ್ಧದಷ್ಟು ಮೇವು ಸುಟ್ಟುಹೋಗಿದೆ.
ಅಶಾಪೂರ ಮಾರ್ಗದತ್ತ ಸಂಚರಿಸುವ ಲಾರಿ, ಬಸ್ ಹಾಗೂ ಇತರೆ ದೊಡ್ಡ ವಾಹನಗಳ ಸಂಚಾರವು ಸ್ಥಗಿತವಾಗಿದೆ.
ರಾಯಚೂರು ತಾಲ್ಲೂಕಿನ ಮಂಚಲಾಪುರದಿಂದ ಉಡಮಗಲ್ ಗ್ರಾಮಕ್ಕೆ ರೈತರು ಮೇವು ತೆಗೆದುಕೊಂಡು ಹೋಗುತ್ತಿದ್ದರು. ಈಗಷ್ಟೇ ಜಿಲ್ಲೆಯಲ್ಲಿ ಜೋಳದ ಕೊಯ್ಲು ನಡೆಯುತ್ತಿದ್ದು, ಒಣಮೇವು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುವುದು ಸಾಮನ್ಯ ನೋಟವಾಗಿದೆ. ಬೆಂಕಿ ಅನಾಹುತ ಘಟನೆಗಳು ನಿರಂತರ ನಡೆಯುತ್ತಿದ್ದರೂ, ರೈತರನ್ನು ಜಾಗೃತಿಗೊಳಿಸುವ ಕೆಲಸ ಆಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.