ಸಿಂಧನೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಮುಕ್ಕುಂದಾದ ಗ್ರಾಮಸ್ಥರಿಗೆ, ನದಿಗೆ ಹರಿಯುವ ಅವಧಿಯಲ್ಲಿ ಯಾರಾದರೂ ಮೃತಪಟ್ಟರೆ ಶವ ಹೂಳುವುದೇ ಸವಾಲಾಗಿದೆ.
ಭಾನುವಾರ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಅಂತ್ಯಕ್ರಿಯೆಗಾಗಿ ಹರಿಗೋಲಿನಲ್ಲಿ ಶವ ಸಾಗಿಸಿದ್ದು, ಜನರು ನದಿಯಲ್ಲಿ ಈಜಿ ಹೋಗುವ ಪರಿಸ್ಥಿತಿ ಎದುರಾಗಿತ್ತು. ಈ ಕುರಿತು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನದಿ ದಂಡೆ ಮೇಲೆ ಸ್ಮಶಾನವಿದೆ. ಮಳೆಗಾಲದಲ್ಲಿ ಕಾಡುವ ಸಮಸ್ಯೆ ಹಿನ್ನಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಮಯದಲ್ಲಿ ನಡುಗಡ್ಡೆಯಲ್ಲಿರುವ ಸ್ಮಶಾನಕ್ಕೆ ಹೋಗಲು ಹರಿಗೋಲು ಅಗತ್ಯ. ಶವವನ್ನು ಸಾಗಿಸಿ, ಈಜಿ ನಡುಗಡ್ಡೆ ತಲುಪಿ ಶವಸಂಸ್ಕಾರ ಮಾಡುತ್ತಾ ಬಂದಿದ್ದಾರೆ.
ಸಮಸ್ಯೆ ನಿವಾರಣೆಗೆ ಆಗ್ರಹ: ಸಮಸ್ಯೆ ನಿವಾರಣೆಗೆ ತಹಶೀಲ್ದಾರ್ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರು ಕ್ರಮ ಕೈಗೊಳ್ಳಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂದು ಗ್ರಾಮದ ನಾಗರಾಜ ದೇವರಮನಿ, ರುದ್ರಮುನಿತಾತ ಒತ್ತಾಯಿಸಿದರು.
‘ಗ್ರಾಮದ ಸರ್ವೆ ನಂಬರ್ 238/2ರಲ್ಲಿ 1.3 ಎಕರೆ ಜಮೀನು ಸ್ಮಶಾನಕ್ಕಾಗಿ ಕಾಯ್ದಿರಿಸಿದೆ. ಮತ್ತೊಂದೆಡೆ ಎರಡು ಎಕರೆ ಭೂಮಿ ಗುರುತಿಸಲಾಗಿದೆ. ಆದರೆ ಸಲಾಗಿದೆ. ಆದರೆ, ವಾಸ್ತು ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಆ ಸ್ಮಶಾನ ಬಳಸಲು ಒಪ್ಪುತ್ತಿಲ್ಲ’ ಎಂದು ತಹಶೀಲ್ದಾರ್ ಅರುಣ ಎಚ್.ದೇಸಾಯಿ ಪ್ರತಿಕ್ರಿಯಿಸಿದ್ದಾರೆ.
ದಶಕಗಳಿಂದ ಶವ ಸಂಸ್ಕಾರಕ್ಕಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಸರ್ಕಾರ ನಮ್ಮ ಗೋಳನ್ನು ಕೇಳುತ್ತಿಲ್ಲ. ಊರಿನ ಜನರ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಿಚಂದ್ರಶೇಖರ ರೆಡ್ಡಿ ಮುಕ್ಕುಂದಾ ಗ್ರಾಮದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.