ADVERTISEMENT

ಚನ್ನಪ‍ಟ್ಟಣ ಕ್ರಾಫ್ಟ್ ಪಾರ್ಕ್‌ಗೆ ಫ್ರಾನ್ಸ್ ವಿದ್ಯಾರ್ಥಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಮೇ 2024, 23:27 IST
Last Updated 4 ಮೇ 2024, 23:27 IST
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಫ್ರಾನ್ಸ್ ದೇಶದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ ವಿದ್ಯಾರ್ಥಿಗಳು ಭೇಟಿ ನೀಡಿದ್ದರು
ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ಗೆ ಫ್ರಾನ್ಸ್ ದೇಶದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ ವಿದ್ಯಾರ್ಥಿಗಳು ಭೇಟಿ ನೀಡಿದ್ದರು   

ಚನ್ನಪಟ್ಟಣ: ಫ್ರಾನ್ಸ್ ದೇಶದ ಲಿಸಾ ಸ್ಕೂಲ್ ಆಫ್ ಡಿಸೈನಿಂಗ್ ವಿದ್ಯಾರ್ಥಿಗಳು ಶುಕ್ರವಾರ ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್‌ಗೆ ಭೇಟಿ ನೀಡಿ ಬೊಂಬೆ ತಯಾರಿಕಾ ಸಾಂಪ್ರದಾಯಿಕ ಕಲೆ ಬಗ್ಗೆ ತಿಳಿದುಕೊಂಡರು. ಕರ್ನಾಟಕ ಪ್ರವಾಸದ ಭಾಗವಾಗಿ ಭೇಟಿ ನೀಡಿದ್ದರು.

ಬೊಂಬೆ ತಯಾರಿಕಾ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದರು. ಬೊಂಬೆಗಳಿಗೆ ಬಳಸುವ ಮರ, ಬೊಂಬೆ ಮಾಡುವ ಮೊದಲು ಮಾಡಿಕೊಳ್ಳುವ ತಯಾರಿಕೆ, ಬೊಂಬೆಗಳಿಗೆ ಬಣ್ಣ ಹಾಕುವ ವಿಧಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದರು.

ತಲೆಮಾರುಗಳಿಂದ ಬಂದಿರುವ ಸಾಂಪ್ರದಾಯಿಕ ಕಲೆಯ ಹಿನ್ನೆಲೆ ಕುರಿತು ಪ್ರಶ್ನಿಸಿದರು. ಕುಶಲಕರ್ಮಿಗಳ ವಾಸ್ತುಶೈಲಿ ಪರಂಪರೆ, ಕಾರ್ಯಕ್ಷಮತೆ ಹಾಗೂ ಕಲೆ ಗೌರವಿಸುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೊಂಬೆ ತಯಾರಿಕೆ, ವಿನ್ಯಾಸಗಳನ್ನು ವಿಡಿಯೊ  ಚಿತ್ರೀಕರಣ ಮಾಡಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.