ADVERTISEMENT

350 ಮಕ್ಕಳ ರಕ್ತದ ಗುಂಪು ವಿಂಗಡಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:19 IST
Last Updated 20 ನವೆಂಬರ್ 2019, 16:19 IST
ಮಕ್ಕಳಿಗೆ ಉಚಿತ ರಕ್ತ ಪರೀಕ್ಷಾ ಕಾರ್ಯಕ್ರಮ
ಮಕ್ಕಳಿಗೆ ಉಚಿತ ರಕ್ತ ಪರೀಕ್ಷಾ ಕಾರ್ಯಕ್ರಮ   

ಬಿಡದಿ: ರೋಟರಿ ಬಿಡದಿ ಸೆಂಟ್ರಲ್ ವತಿಯಿಂದ ಬುಧವಾರ ಅಬ್ಬನಕುಪ್ಪೆ ಕಾಲೊನಿಯ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಪಾಠಶಾಲೆ, ತಿಮ್ಮೇಗೌಡನ ದೊಡ್ಡಿ, ಇಟ್ಟಮಡು ಶಾಲೆಗಳಲ್ಲಿ ಮಕ್ಕಳ ರಕ್ತದ ಗುಂಪು ಪರೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬಳಿಕ ಸ್ಥಳದಲ್ಲೇ ರಕ್ತದ ಗುರುತಿನ ಕಾರ್ಡನ್ನು ಸ್ಥಳದಲ್ಲಿ ವಿತರಣೆ ಮಾಡಲಾಯಿತು. 350 ಮಕ್ಕಳು ಇದರ ಪ್ರಯೋಜನ ಪಡೆದರು.

ಜೀವ ಜ್ಯೋತಿ ಮೆಡಿಕಲ್‌ ಸರ್ವಿಸ್ ಫೌಂಡೇಶನ್‌ನ ರಘುಕುಮಾರ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಾದ ಲೇಖನ, ಉಮಾ, ಸಾಗರ್, ನಮ್ರತಾ ರಕ್ತಪರೀಕ್ಷೆ ಮಾಡಿದರು.

ADVERTISEMENT

ರೋಟರಿ ಅಧ್ಯಕ್ಷ ಚಂದ್ರಶೇಖರ್ ಎಂ, ಕಾರ್ಯದರ್ಶಿ ಕೃಷ್ಣ ಜಿ, ಸಮುದಾಯ ಸೇವೆ ನಿರ್ದೇಶಕ ಎಚ್.ವಿ.ಗೋವಿಂದಯ್ಯ, ನಿರ್ದೇಶಕರಾದ ರಾಮಕೃಷ್ಣಯ್ಯ, ಆನಂದ್ ಬಿ.ಆರ್, ಶಿವರಾಜ್ ಬಿ, ರೇಣುಕಪ್ಪ, ಶ್ರೀರಾಮು ಹಾಜರಿದ್ದರು.

ನ.27ರಂದು ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಪಾಠಶಾಲೆಗಳಾದ ತೊರೆದೊಡ್ಡಿ, ಬಾನಂದೂರು ಮತ್ತು ಜೋಗರದೊಡ್ಡಿ ಪ್ರಾಥಮಿಕ ಪಾಠಶಾಲೆಯಲ್ಲಿ 250 ಮಕ್ಕಳ ರಕ್ತದ ಗುಂಪು ನಿಗದಿ ಕಾರ್ಯಕ್ರಮ ನಡೆಯಲಿದೆ. ಬಳಿಕ ರಕ್ತದ ಗುಂಪಿನ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.