ಹಾರೋಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದ ಹುಂಡಿ ಎಣಿಕೆ ತಹಶೀಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ನೆರವೇರಿತು.
ದೇವಾಸ್ಥಾನದ ಹುಂಡಿಯಲ್ಲಿ ವಿವಿಧ ಬೆಲೆಯ ₹8.80 ಲಕ್ಷ ಹಣ ಸಂಗ್ರಹವಾಗಿದೆ. ಜೊತೆಗೆ 7 ಸಾವಿರ ನಾಣ್ಯಗಳು, 58 ಗ್ರಾಂ ಚಿನ್ನ ಹಾಗೂ 340 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ದ್ವಿತೀಯ ದರ್ಜೆ ಗುಮಾಸ್ತೆ ಮಮತಾ, ಕಂದಾಯ ಇಲಾಖೆ ನಿರೀಕ್ಷಕರಾದ ನರೇಶ್, ಪ್ರಕಾಶ್, ಗ್ರಾಮ ಆಡಳಿತಧಿಕಾರಿ ಅಶೋಕ್, ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ಗ್ರಾಮ ಸಹಾಯಕರು, ದೇವಾಲಯದ ಅರ್ಚಕರು, ಹಾರೋಹಳ್ಳಿ ಪೊಲೀಸರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.