
ಕನಕಪುರ: ತಾಲ್ಲೂಕಿನ ಚುಂಚಿ ಫಾಲ್ಸ್ ನೋಡಲು ಶನಿವಾರ ಬೆಂಗಳೂರಿನಿಂದ ಬಂದಿದ್ದ ಜಯನಗರದ ಜೈನ್ ಕಾಲೇಜಿನ ಮೂರನೇ ವರ್ಷದ ಬಿಸಿಎ ವಿದ್ಯಾರ್ಥಿ ಸಾಯಿ ಪ್ರಸಾದ್ ಪಾಟೀಲ(21) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೂಲತಃ ಬೀದರನ ಸಾಯಿ ಪ್ರಸಾದ್ ಬೆಂಗಳೂರಿನ ಅಕ್ಕ ಮತ್ತು ಭಾವನ ಮನೆಯಲ್ಲಿದ್ದು ಕೊಂಡು ಓದುತ್ತಿದ್ದ. ಶನಿವಾರ ಬೆಳಗ್ಗೆ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಎಂಟು ಸ್ನೇಹಿತರು ಚುಂಚಿ ಫಾಲ್ಸ್‌ಗೆ ಬಂದಿದ್ದರು.
ಈ ವೇಳೆ ಎಲ್ಲರೂ ಚುಂಚಿ ಫಾಲ್ಸ್‌ನ ನೀರಿನಲ್ಲಿ ಇಳಿದು ಆಟವಾಡುತ್ತಿದ್ದರು. ಸಾಯಿ ಪ್ರಸಾದ್ ಪಾಟೀಲ ಮತ್ತು ಆದಿತ್ಯ ಆಳವಾದ ನೀರಿನಲ್ಲಿ ಸಿಲುಕಿದ್ದಾರೆ. ಈ ವೇಳೆ ಆದಿತ್ಯನನ್ನು ಸ್ನೇಹಿತರು ರಕ್ಷಣೆ ಮಾಡಿದ್ದಾರೆ. ಆದರೆ ಸಾಯಿ ಪ್ರಸಾದ್ ಆಳವಾದ ನೀರಿನಲ್ಲಿ ಮುಳಗಿದ್ದರಿಂದ ಸ್ನೇಹಿತರು ರಕ್ಷಣೆ ಮಾಡಲು ವಿಫಲರಾದರು.
ಸ್ನೇಹಿತರು ವಿಚಾರವನ್ನು ಸಾತನೂರು ಪೊಲೀಸರಿಗೆ ತಿಳಿಸಿದರು. ಸಬ್‌ಇನ್‌ಸ್ಪೆಕ್ಟರ್ ದುರ್ಗೆಗೌಡ ಮತ್ತು ತಂಡ, ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನ ಒಂದು ಗಂಟೆವರೆಗೆ ಶೋಧ ಕಾರ್ಯ ನಡೆಸಿ ಶವವನ್ನು ಹೊರ ತೆಗೆದಿದ್ದಾರೆ.
ಮೃತ ವಿದ್ಯಾರ್ಥಿಯ ಭಾವ ಸಂತೋಷ್ ದೂರು ನೀಡಿದ್ದಾರೆ. ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ಶವವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.