ADVERTISEMENT

ಮಾಗಡಿ | ಹೇಮಾವತಿ ನದಿ ನೀರು ಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 13:09 IST
Last Updated 29 ನವೆಂಬರ್ 2023, 13:09 IST
ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಜಗಣ್ಣಯ್ಯ ಮಠಾಧ್ಯಕ್ಷ ಚನ್ನ ಬಸವಸ್ವಾಮೀಜಿ ಚಾಲನೆ ನೀಡಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ತಾಲ್ಲೂಕು ಸಂಘದ ಅಧ್ಯಕ್ಷ ಗೋವಿಂದರಾಜು, ಕೆ.ಎಚ್‌.ಶಿವರಾಜ್‌, ರಂಗಸ್ವಾಮಯ್ಯ, ಟಿ.ಎನ್‌.ಪದ್ಮನಾಭ ಹಾಗೂ ರೈತರು ಇದ್ದರು
ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆದ ಕನ್ನಡ ರಾಜ್ಯೋತ್ಸವಕ್ಕೆ ಜಗಣ್ಣಯ್ಯ ಮಠಾಧ್ಯಕ್ಷ ಚನ್ನ ಬಸವಸ್ವಾಮೀಜಿ ಚಾಲನೆ ನೀಡಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ತಾಲ್ಲೂಕು ಸಂಘದ ಅಧ್ಯಕ್ಷ ಗೋವಿಂದರಾಜು, ಕೆ.ಎಚ್‌.ಶಿವರಾಜ್‌, ರಂಗಸ್ವಾಮಯ್ಯ, ಟಿ.ಎನ್‌.ಪದ್ಮನಾಭ ಹಾಗೂ ರೈತರು ಇದ್ದರು    

ಮಾಗಡಿ: ತಾಲ್ಲೂಕಿನ ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ ಬಳಿ ಮಂಗಳವಾರ ತಾಲ್ಲೂಕು ರೈತ ಸಂಘ ಹಾಗೂ ಹಸಿರುನಮ್ಮ ನ್ಯೂಸ್ ಕಂಪನಿಯ ಸೀನಿಯರ್ ರೈಟರ್ ಆಗಿ, ನಿಮ್ಮ ಪ್ರಮುಖ ಪಾತ್ರವು ಪತ್ರಿಕೆ ಮಾನವೀಯತೆಯ ಮಾನದಂಡಗಳನ್ನು ಅನುಸರಿಸಿದ ಅದ್ವಿತೀಯ ವಾರ್ತೆಗಳನ್ನು ನಿರ್ಮಿಸುವುದು. ಸರಿಯಾಗಿ ವಿಸೇನೆ ವತಿಯಿಂದ 10ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಗುಡೇಮಾರನಹಳ್ಳಿ ಜಗಣ್ಣಯ್ಯ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ತುಂಬಿಸುವುದಾಗಿ ಎರಡು ದಶಕಗಳಿಂದ ಹೇಳಿಕೊಂಡು ಬರುತ್ತಿರುವ ಜನಪ್ರತಿನಿಧಿಗಳಿಗೆ ರೈತರ ಸಂಕಟ ಅರ್ಥವಾಗುತ್ತಿಲ್ಲ. ಗಡಿಕಾಯುವ ಯೋಧರು ಮತ್ತು ರೈತರು ನಿಜವಾದ ಭೂತಾಯಿ ಮಕ್ಕಳು ಎಂದು ಹೇಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ. ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವಂತೆ ರೈತ ಸಂಘದಿಂದ ಹೋರಾಟ ರೂಪಿಸಲಾಗುವುದು. ಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ಮುಖ್ಯಮಂತ್ರಿಗಳು ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. ಜನ ಭಾಷೆಯಾದ ಕನ್ನಡ, ಯುವಜನರಿಗೆ ಅನ್ನಕೊಡುವ ಭಾಷೆಯಾಗಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅನುಕೂಲ ಮಾಡಿಕೊಡಬೇಕಿದೆ ಎಂಧರು.

ADVERTISEMENT

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಹೇಮಾವತಿ ನದಿ ನೀರು ಕೆರೆಗಳಿಗೆ ತುಂಬಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.

ರೈತ ಮುಖಂಡರಾದ ಬಗಿನಗೆರೆ ರಂಗಸ್ವಾಮಿ, ಭಕ್ತರಹಳ್ಳಿ ರಾಮೇಗೌಡ, ಬೈರೇಗೌಡ, ಕೆ.ಎಚ್‌.ಶಿವರಾಜ್‌, ರಿಜ್ಞಾನ್‌, ರಾಮಯ್ಯ, ನೇರಳೆಕೆರೆ ಗಂಗಾಧರ್‌, ಕೆಂಪೇಗೌಡ, ಶಿವಣ್ಣ, ಮಧು, ಕೆಂಪಣ್ಣ, ಮಾರೇಗೌಡ, ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಟಿ.ಎನ್‌.ಪದ್ಮನಾಭ ಹಾಗೂ ರೈತರು ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.