
ಪ್ರಜಾವಾಣಿ ವಾರ್ತೆ
ಮಾಗಡಿ: ರಾಗಿ ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಮುತ್ತಗದಹಳ್ಳಿ ನಿವಾಸಿ ಚಂದ್ರಶೇಖರ್ (45) ಮೃತರು.
ಪ್ರತಿನಿತ್ಯ ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇಯಿಸಿಕೊಂಡು ಗ್ರಾಮದ ಕಡೆ ಬರುವ ವೇಳೆ ರಾಗಿ ಕಟಾವು ಯಂತ್ರ ಹಿಂಬದಿಯಿಂದ ಗುದ್ದಿದ ರಭಸಕ್ಕೆ ಚಂದ್ರಶೇಖರ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಕೂಡಲೇ ಸಂಕೀಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.