ಬಿಡದಿ (ರಾಮನಗರ): ಸಕಾಲದಲ್ಲಿ ಸಾಲ ಮರು ಪಾವತಿಸಿಲ್ಲ ಎಂದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯು ಪಟ್ಟಣದ ತೊರೆದೊಡ್ಡಿ (ಇಟ್ಟಮಡು) ಗ್ರಾಮದ ಮನೆಯೊಂದಕ್ಕೆ ಬೀಗ ಜಡಿದು ಜಪ್ತಿ ಮಾಡಿದೆ.
ನ್ಯಾಯಾಲಯದ ಜಪ್ತಿ ಆದೇಶ ಹಿಡಿದು ಪೊಲೀಸರೊಂದಿಗೆ ಶನಿವಾರ ಗ್ರಾಮಕ್ಕೆ ಬಂದ ಫೈನಾನ್ಸ್ ಸಿಬ್ಬಂದಿ ಅಲಮೇಲಮ್ಮ ಅವರ ಮನೆ ಜಪ್ತಿ ಮಾಡಿ ಬೀಗ ಜಡಿದರು. ಮನೆ ಜಪ್ತಿ ನೋಟಿಸ್ ಅನ್ನು ಮನೆಗೆ ಅಂಟಿಸಲಾಗಿದೆ.
ಸಂಸ್ಥೆಯಿಂದ ಗೃಹಸಾಲ ಪಡೆದಿದ್ದ ಗ್ರಾಮದ ಅಲಮೇಲಮ್ಮ ಸಕಾಲದಲ್ಲಿ ತೀರಿಸಿರಲಿಲ್ಲ. ನಾಲ್ಕು ಸಲ ನೋಟಿಸ್ ನೀಡಲಾಗಿತ್ತು ಎಂದು ಎಂದು ಫೈನಾನ್ಸ್ ಸಿಬ್ಬಂದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.