ವೆಂಕಟರಾವ್ ನಾಡಗೌಡ
ರಾಮನಗರ: ಯಾರು ಕೂಡ ಕೇವಲ ಒಂದು ಜಾತಿ, ಒಂದು ಸಮುದಾಯದಿಂದ ಆಯ್ಕೆಯಾಗಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರು ನಮ್ಮಿಂದ ದೂರ ಆಗಿಲ್ಲ. ಮುಸ್ಲಿಮರು ನಮ್ಮಿಂದ ದೂರವಾಗಿದ್ರೆ ಕಲಬುರಗಿಯಲ್ಲಿ ಯಾಕೆ ಜೆಡಿಎಸ್ ಸೇರುತ್ತಿದ್ದರು ಎಂದು ಪಕ್ಷದ ಮಾಜಿ ಶಾಸಕ ವೆಂಕಟ್‌ರಾವ್ ನಾಡಗೌಡ ಹೇಳಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ಬೆನ್ನಲ್ಲೇ ಬಿಡದಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ, ಎಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷದ ಶಾಸಕರು, ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ವೇಳೆ ಅವರು ಮಾತನಾಡಿದರು.
ಪಕ್ಷದ ಅಧ್ಯಕ್ಷ ಇಬ್ರಾಹಿಂ ಅವರು ದೇವೇಗೌಡ ಅವರ ತೀರ್ಮಾನಕ್ಕೆ ಬದ್ದ ಅಂತ ಈಗಾಗಲೇ ಹೇಳಿದ್ದಾರೆ. ಹಾಗಾಗಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.