ಬಸ್
– ಪ್ರಜಾವಾಣಿ ಚಿತ್ರ
ರಾಮನಗರ: ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಸಚಿವಾಲಯದ ಅಧಿಸೂಚನೆಯಂತೆ, ಹೊಸದಾಗಿ ನೋಂದಣಿಯಾಗುವ ಮತ್ತು ಈಗಾಗಲೇ ನೋಂದಣಿಯಾಗಿರುವ ಬ್ಯಾಟರಿ ಚಾಲಿತ ಮೆಥನಾಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ಸಾರಿಗೆ ವಾಹನಗಳಿಗೆ ಮೋಟಾರು ವಾಹನ ಕಾಯ್ದೆ-1988ರ ಕಲಂ 66(1)ರ ಅಡಿ ರಹದಾರಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿತ್ತು. ಸಚಿವಾಲಯವು ಜುಲೈ 1ರ ಅಧಿಸೂಚನೆಯಲ್ಲಿ ಈಗಾಗಲೇ ತಿಳಿಸಿದ ಇಂಧನ ಮಾದರಿ ಸಾರಿಗೆ ವಾಹನಗಳಿಗೆ ರಹದಾರಿ ಪಡೆಯಲು ನೀಡಲಾಗಿದ್ದ ವಿನಾಯಿತಿ ಹಿಂಪಡೆದಿದೆ.
ಹಾಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಮತ್ತು ಹಾರೋಹಳ್ಳಿ ತಾಲ್ಲೂಕುಗಳ ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾ ಕ್ಯಾಬ್‌ಗಳ ಮಾಲೀಕರು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನವೆಂಬರ್ ತಿಂಗಳೊಳಗೆ ಅರ್ಜಿ ಸಲ್ಲಿಸಿ, ಸೂಕ್ತ ದಾಖಲಾತಿಗಳನ್ನು ಶುಲ್ಕ ರಹಿತವಾಗಿ ರಹದಾರಿ ಪಡೆಯಬೇಕು.
ಜಿಲ್ಲೆಯ ವ್ಯಾಪ್ತಿಯಲ್ಲಿ ನೋಂದಣಿಗೊಂಡಿರುವ ಸಾರಿಗೆ ಆಯುಕ್ತರು ಅನುಮತಿಸಿರುವ ಆಟೊ ರಿಕ್ಷಾಗಳ ಮಾಲೀಕರು ಆಟೋರಿಕ್ಷಾ, ಕ್ಯಾಬ್ ನೋಂದಣಿಗೆ ಅನುಮತಿ ಇದೆ. ಆದರೂ, ಸಂಬಂಧಪಟ್ಟ ನೋಂದಣಿ ಪ್ರಾಧಿಕಾರದಲ್ಲಿ ಪರಿವರ್ತನೆ ಮಾಡಿಕೊಂಡು ಸಾರಿಗೆಯೇತರ ವಾಹನವನ್ನು ವೈಯಕ್ತಿಕ ಉಪಯೋಗಕ್ಕಾಗಿ ಪರಿವರ್ತನೆ ಮಾಡಿಸಿಕೊಂಡು ಬಾಡಿಗೆ ಆಧಾರದಲ್ಲಿ ಅಥವಾ ಪ್ರತಿಫಲಕ್ಕಾಗಿ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ ಅಂತಹ ವಾಹನಗಳು ಸಾರ್ವಜನಿಕವಾಗಿ ಸಂಚರಿಸುವಾಗ ಕಂಡು ಬಂದಲ್ಲಿ ವಾಹನಗಳ ವಿರುದ್ಧ ಮೋಟಾರು ವಾಹನಗಳ ನಿಯಮಾವಳಿಗಳ ಪ್ರಕಾರ ಪ್ರಕರಣಗಳನ್ನು ದಾಖಲಿಸಲಾಗುವುದು.
ಸಂಬಂಧಪಟ್ಟ ಮಾಲೀಕರು ಸ್ವ-ಇಚ್ಛೆಯಿಂದ ಅರ್ಜಿ ಸಲ್ಲಿಸಿ, ಸಾರಿಗೆ ವಾಹನವನ್ನಾಗಿ ಪರಿವರ್ತಿಸಲು ಬಂದಲ್ಲಿ ಅನುಮೋದನೆ ನೀಡಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.