ರಾಮನಗರ: ಇಲ್ಲಿನ ಜಿಲ್ಲಾ ಗ್ರಂಥಾಲಯದಲ್ಲಿ ಇದ್ದ ಪುಸ್ತಕಗಳನ್ನು ಸ್ಥಳಾವಕಾಶದ ಕೊರತೆಯ ನೆಪವೊಡ್ಡಿ ರದ್ದಿಗೆ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಥಳದ ಅಭಾವದಿಂದಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಮೂಟೆ ಕಟ್ಟಿಡಲಾಗಿತ್ತು. ಇದೀಗ ಆ ಪುಸ್ತಕಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗ್ರಂಥಾಲಯದ ಮುಂಭಾಗ ಬೃಹತ್ ಲಾರಿಗೆ ಮೂಟೆ ತುಂಬುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದ್ಧಾರೆ. ಬಾಕಿ ಉಳಿದ್ದ ಮೂಟೆಗಳನ್ನು ತೆರೆದು ನೋಡಿದಾಗ ಅಲ್ಲಿ ಉತ್ತಮ ಗುಣಮಟ್ಟದ ಪುಸ್ತಕಗಳು ಇರುವುದು ಕಂಡುಬಂದಿವೆ.
ಗ್ರಂಥಾಲಯ ಇಕ್ಕಟ್ಟಾಗಿದ್ದರೂ ಓದುಗರ ಸಂಖ್ಯೆಯೇನು ಕಡಿಮೆ ಇಲ್ಲ. ಹೀಗಿರುವಾಗ ಇರುವ ಪುಸ್ತಕಗಳನ್ನು ರದ್ದಿಗೆ ಹಾಕಿದ್ದು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆ. ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಈ ಪುಸ್ತಕಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಗ್ರಂಥಾಲಯದ ಸಿಬ್ಬಂದಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.