ಮಾಗಡಿ: ತಾಲ್ಲೂಕಿನ ಬಾಣವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಲೂರು ದಾಖಲೆ ಕಕ್ಕೆಪಾಳ್ಯದ ಗಂಗಯ್ಯ ಅವರ ಮಾವು ಮತ್ತು ತೆಂಗಿನ ತೋಟಕ್ಕೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ತೋಟ ಸಂಪೂರ್ಣವಾಗಿ ಸುಟ್ಟುಹೋಗಿದೆ.
‘ತೋಟದಲ್ಲಿದ್ದ, ಕಟಾವಿಗೆ ಬಂದಿದ್ದ 200 ಫಲಭರಿತ ಮಾವಿನ ಮರಗಳು ಮತ್ತು 60 ತೆಂಗಿನ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ₹ 15 ಲಕ್ಷ ನಷ್ಟವಾಗಿದೆ’ ಎಂದು ತೋಟದ ಮಾಲೀಕ ಗಂಗಯ್ಯ ತಿಳಿಸಿದ್ದಾರೆ.
‘ಫಲಭರಿತವಾಗಿ ಬೆಳೆದಿದ್ದ ತೋಟವನ್ನು ನೋಡಿ ಕೆಂಗಣ್ಣು ಬೀರುತ್ತಿದ್ದವರೇ ಬೆಂಕಿ ಹಚ್ಚಿದ್ದಾರೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು’ ಎಂದು ಗಂಗಯ್ಯ ಅವರ ಪತ್ನಿ ರತ್ನಮ್ಮ, ಮಗ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.