ADVERTISEMENT

ಮಾಗಡಿ | ಸಂಕ್ರಾಂತಿ: ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 5:54 IST
Last Updated 16 ಜನವರಿ 2024, 5:54 IST
ಮಾಗಡಿ ಕಲ್ಯಾಬಾಗಿಲು ಬಸವಣ್ಣ ದೇವಾಲಯದ ಮುಂದೆ ಬಿ.ಕೆ.ರಸ್ತೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು
ಮಾಗಡಿ ಕಲ್ಯಾಬಾಗಿಲು ಬಸವಣ್ಣ ದೇವಾಲಯದ ಮುಂದೆ ಬಿ.ಕೆ.ರಸ್ತೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು    

ಮಾಗಡಿ: ಪಟ್ಟಣದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹೊಸಪೇಟೆ ಅಂಬಾರಯ್ಯನ ಕಟ್ಟೆ ಬಳಿ ಕಾಟಮರಾಯ ಪಶುಪಾಲಕ ದೈವಕ್ಕೆ ಎಡೆಹಾಕಿ, ಹೊಸಮಡಿಕೆಯಲ್ಲಿ ಹಸುವಿನ ಹಾಲು ಉಕ್ಕಿಸಿ ಪೂಜೆ ಸಲ್ಲಿಸಿದರು. ಅಲಂಕರಿಸಿದ್ದ ರಾಸುಗಳನ್ನು ಹೊಸಪೇಟೆ ಸರ್ಕಲ್‌ ಬಳಿ ಕಿಚ್ಚು ಹಾಯಿಸಲಾಯಿತು.

ಕಲ್ಯಾಬಾಗಿಲು ಬಸವಣ್ಣ ದೇವರಿಗೆ ಅಭಿಷೇಕ ಮಾಡಲಾಯಿತು. ಹೊಸಹಳ್ಳಿ ಮತ್ತು ಪಟ್ಟಣದ ದೇಸಿ ಹಸುಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ಡಿ.ಸಿ.ಶಿವಣ್ಣ, ಗೆಳೆಯರ ಬಳಗದ ಸಿ.ಜಯರಾಮು, ಬೆಸ್ಕಾಂ ನೌಕರರ ಸಂಘದ ಲಕ್ಷ್ಮಣ್‌, ಹೊಸಹಳ್ಳಿ, ಕಲ್ಯಾಬಾಗಿಲು ಬಡಾವಣೆ ಸಾವಿರಾರು ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ADVERTISEMENT
ಮಾಗಡಿ ಕಲ್ಯಾಬಾಗಿಲು ಬಸವಣ್ಣ ದೇವಾಲಯದ ಮುಂದೆ ಬಿ.ಕೆ.ರಸ್ತೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು
ಮಾಗಡಿ ಕಲ್ಯಾಬಾಗಿಲು ಬಸವಣ್ಣದೇವಾಲಯದ ಬಳಿ ಅಲಂಕೃತತ ರಾಸುಗಳಿಗೆ ಡಿ.ಸಿ.ಶಿವಣ್ಣ ಸಿ.ಜಯರಾಮ್‌ ಹಾಗೂ ರೈತರು ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.