
ಚನ್ನಪಟ್ಟಣ: ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ಶಿವರಾತ್ರಿ ಪ್ರಯುಕ್ತ ಭಾನುವಾರ ರಾತ್ರಿ ಗ್ರಾಮಸ್ಥರು ಚನ್ನಪ್ಪಾಜಿ ದೇವರಿಗೆ ಪದ್ಧತಿಯಂತೆ ಮಾಂಸಾಹಾರ ನೈವೇದ್ಯ ಮಾಡಿ ನಂತರ ನೂರಾರು ಭಕ್ತರು ಮಾಂಸಾಹಾರವನ್ನು ಪ್ರಸಾದವಾಗಿ ಸೇವಿಸಿದರು.
ಹಲವಾರು ವರ್ಷಗಳಿಂದ ಪ್ರತಿ ಶಿವರಾತ್ರಿಯ ದಿನ ಈ ಪದ್ಧತಿ ನಡೆದುಕೊಂಡು ಬರುತ್ತಿದೆ.
ಮಂಗಾಡಹಳ್ಳಿ, ವಿರುಪಾಕ್ಷಿಪುರ, ಬಲ್ಲಾಪಟ್ಟಣ, ಕೋಡಂಬಹಳ್ಳಿ, ಸೋಗಾಲ, ಅಕ್ಕೂರು, ಸಾದಾರಹಳ್ಳಿ, ಸೋಗಾಲ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಹಾಗೂ ಚನ್ನಾಪ್ಪಾಜಿ ಒಕ್ಕಲಿನವರು ಇಲ್ಲಿಗೆ ಬಂದು ಸೇವೆ ತೀರಿಸುವುದು ವಾಡಿಕೆ ಎಂದು ದೇವಾಲಯದ ಅರ್ಚಕ ಚನ್ನಪ್ಪ ತಿಳಿಸಿದರು.
ಭಕ್ತರು ಯಾವುದಾದರೂ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಶಿವರಾತ್ರಿಯ ದಿನ ಹರಕೆ ತೀರಿಸುತ್ತಾರೆ. ನಂತರ ದೇವಸ್ಥಾನದ ಆವರಣದಲ್ಲೆ ಅಡುಗೆ ಮಾಡಿ ಬರುವ ಭಕ್ತರಿಗೆಲ್ಲಾ ಊಟ ಬಡಿಸುತ್ತಾರೆ. ಇಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡುತ್ತಾರೆ. ತಡರಾತ್ರಿಯವರೆಗೂ ಈ ಸೇವೆ ನಡೆಯುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.