ADVERTISEMENT

ಮೇಕೆದಾಟು ಪಾದಯಾತ್ರೆ: ರಾಗಿಮುದ್ದೆ, ಮೈಸೂರು ಪಾಕ್ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 15:02 IST
Last Updated 9 ಜನವರಿ 2022, 15:02 IST
ಮೇಕೆದಾಟು ಪಾದಯಾತ್ರೆ
ಮೇಕೆದಾಟು ಪಾದಯಾತ್ರೆ   

ರಾಮನಗರ: ಭಾನುವಾರ ಮೇಕೆದಾಟು ಪಾದಯಾತ್ರೆಗೆ ಬಂದ ಅಷ್ಟೂ ಜನರಿಗೆ ಕಾಂಗ್ರೆಸ್ ಊಟೋಪಚಾರದ ವ್ಯವಸ್ಥೆ ಮಾಡಿತ್ತು.

ಬೆಳಿಗ್ಗೆ ಕಾರ್ಯಕ್ರಮದ ವೇದಿಕೆ ಬಳಿ ಉಪ್ಪಿಟ್ಟು, ಕೇಸರಿಬಾತ್‌, ರೈಸ್ ಬಾತ್‌ ಉಪಾಹಾರ ದೊರೆಯಿತು.

ಮಧ್ಯಾಹ್ನ ಹೆಗ್ಗನೂರಿನಲ್ಲಿ ರಾಗಿಮುದ್ದೆ, ಕಾಳು ಸಾಂಬಾರ್‌, ಪೂರಿ, ತರಕಾರಿ ಪುಲಾವ್‌ ಜೊತೆಗೆ ವಡೆ ಹಾಗೂ ಮೈಸೂರು ಪಾಕ್ ಉಣಬಡಿಸಲಾಯಿತು.

ಇದಲ್ಲದೆ ದಾರಿಯುದ್ದಕ್ಕೂ ಜನರಿಗೆ ಬೆಲ್ಲದ ಪಾನಕ, ನಿಂಬೆ ಷರಬತ್ತು, ಕಬ್ಬಿನ ಜ್ಯೂಸ್, ಕಿತ್ತಳೆ ಹಣ್ಣು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.