ADVERTISEMENT

ಏಪ್ರಿಲ್‌ 17ರಂದು ನಿಖಿಲ್‌ ವಿವಾಹ: ಜಾನಪದ ಲೋಕದ ಬಳಿ ಸ್ಥಳ ಅಂತಿಮ

ಶೀಘ್ರದಲ್ಲೇ ಜ್ಯೋತಿಷಿಗಳಿಂದಲೂ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 15:21 IST
Last Updated 12 ಫೆಬ್ರುವರಿ 2020, 15:21 IST
ವಿವಾಹಕ್ಕೆ ಗೊತ್ತು ಮಾಡಿರುವ ಸ್ಥಳವನ್ನು ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಪರಿಶೀಲಿಸಿದರು
ವಿವಾಹಕ್ಕೆ ಗೊತ್ತು ಮಾಡಿರುವ ಸ್ಥಳವನ್ನು ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಪರಿಶೀಲಿಸಿದರು   

ರಾಮನಗರ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಹಾಗೂ ರೇವತಿ ವಿವಾಹ ಏಪ್ರಿಲ್‌ 17ರಂದು ಇಲ್ಲಿನ ಜಾನಪದ ಲೋಕದ ಸಮೀಪ ಜಮೀನಿನಲ್ಲಿ ನಡೆಯಲಿದೆ.

ಈ ಪ್ರದೇಶ ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ದೂರದಲ್ಲಿ ಇದ್ದು, ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿಯೇ ಸೆಟ್‌ ಹಾಕಿ ವಿವಾಹ ನೆರವೇರಿಸಲು ನಿಶ್ಚಯಿಸಲಾಗಿದೆ. ಮದುವೆಗಾಗಿ ಗೊತ್ತು ಮಾಡಲಾದ 54 ಎಕರೆ ಪ್ರದೇಶವನ್ನು ಕುಮಾರಸ್ವಾಮಿ ತಮ್ಮ ಬೀಗರಾದ ಮಂಜುನಾಥ್‌ ಅವರೊಂದಿಗೆ ಬುಧವಾರ ವೀಕ್ಷಣೆ ಮಾಡಿದರು.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ ‘ಇದೇ ಸ್ಥಳದಲ್ಲಿ ಏಪ್ರಿಲ್‌ 17ರಂದು ಮದುವೆ ನಡೆಯಲಿದೆ. ಸಂಪ್ರದಾಯಬದ್ಧವಾಗಿ ಕಾರ್ಯಕ್ರಮಗಳು ನೆರವೇರಲಿದ್ದು, ಇನ್ನೆರಡು ದಿನದಲ್ಲಿ ಜ್ಯೋತಿಷಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲಿಸಲಿದ್ದಾರೆ. ಕಲ್ಯಾಣ ಮಂಟಪ ಸೇರಿದಂತೆ ಯಾವುದು ಎಲ್ಲಿರಬೇಕು ಎಂದು ಹೇಳಲಿದ್ದಾರೆ. ಭೋಜನಾಲಯ, ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ’ ಎಂದು ತಿಳಿಸಿದರು.

ADVERTISEMENT

‘ಇದು ಆಡಂಬರದ ಮದುವೆ ಅಲ್ಲ. ಆದರೆ ಯಾವುದಕ್ಕೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಚೆಯೇ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಆಹ್ವಾನಪತ್ರಿಕೆ ಸರಳವಾಗಿ ಇರಲಿದ್ದು, ನನ್ನೆಲ್ಲ ಜನರಿಗೆ ಆಮಂತ್ರಣ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.