ADVERTISEMENT

ರಾಮನಗರ ನಗರಸಭೆ ಚುನಾವಣೆ: ಮೃತ ಅಭ್ಯರ್ಥಿ ಲೀಲಾಗೆ ಭಾರಿ ಅಂತರದ ಜಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 7:40 IST
Last Updated 30 ಏಪ್ರಿಲ್ 2021, 7:40 IST
ಲೀಲಾ ಗೋವಿಂದರಾಜು
ಲೀಲಾ ಗೋವಿಂದರಾಜು   

ರಾಮನಗರ: ಕೋವಿಡ್ ಸೋಂಕಿನಿಂದಾಗಿ ಗುರುವಾರವಷ್ಟೇ ಮೃತಪಟ್ಟಿದ್ದ ನಾಲ್ಕನೇ ವಾರ್ಡ್ ಅಭ್ಯರ್ಥಿ ಲೀಲಾ ಗೋವಿಂದರಾಜು ಅವರಿಗೆ ರಾಮನಗರ ನಗರಸಭೆ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ದೊರೆತಿದೆ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಲೀಲಾ ಅವರ ಪರವಾಗಿ ಒಟ್ಟು 917 ಮತಗಳು ಚಲಾವಣೆ ಆಗಿದ್ದು, ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿಯನ್ನು‌ ಮಣಿಸಿದ್ದಾರೆ.

ಲೀಲಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರೂ ಅವರ ಮನೆಯಲ್ಲಿ ಸಂಭ್ರಮದ ಬದಲಿಗೆ ಸೂತಕದ ವಾತಾವರಣ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.