ADVERTISEMENT

ರಾಜಕಾಲುವೆ ಒತ್ತುವರಿ: ದೂರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 8:54 IST
Last Updated 12 ಜೂನ್ 2020, 8:54 IST
ಮಾಗಡಿ ಬೆಟ್ಟಹಳ್ಳಿ ಕಾಲೊನಿ ಬಳಿ ಸೆರೆಯಾಗಿರುವ ಚಿರತೆ
ಮಾಗಡಿ ಬೆಟ್ಟಹಳ್ಳಿ ಕಾಲೊನಿ ಬಳಿ ಸೆರೆಯಾಗಿರುವ ಚಿರತೆ   

ಮಾಗಡಿ: ಬೈಚಾಪುರ ಗ್ರಾಮದ ಸರ್ವೆ ನಂಬರ್‌ 10,11,1ರ ಜಮೀನಿನಲ್ಲಿ ರಾಜಕಾಲುವೆ ಹಾದು ಹೋಗಿದ್ದು ಕೆಲವರು ಅಕ್ರಮವಾಗಿ ಮುಚ್ಚಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ರಾಜಕಾಲುವೆ ಮುಚ್ಚಿರುವುದನ್ನು ತೆರವುಗೊಳಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾಧಿಕಾರಿಗೆ 2020ರ ಮಾರ್ಚ್‌ 23 ರಂದು ಮನವಿ ಸಲ್ಲಿಸಲಾಗಿತ್ತು ಎಂದು ಎನ್ಇಎಸ್‌ ಬಡಾವಣೆ ಕೆ.ರಂಗನಾಥ ತಿಳಿಸಿದರು.

ಈ ಸಂಬಂಧ ರಾಜಕಾಲುವೆ ಸರ್ವೆ ಮಾಡಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಪಟ್ಟಣದ ವಿವಿಧ ಮುಜರಾಯಿ ಇಲಾಖೆಗೆ ಸೇರಿರುವ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತೆರವುಗೊಳಿಸಲು ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ಹೊಂಬಾಳಮ್ಮನ ಕೆರೆ, ಗೌರಮ್ಮನ ಕೆರೆ, ಭಾರ್ಗಾವತಿಕೆರೆ, ಕರೇನಹಳ್ಳಿ , ಹೊಸಹಳ್ಳಿ ಕೆರೆಗಳ ಅಕ್ರಮ ಒತ್ತುವರಿ ಬಗ್ಗೆಯೂ ದೂರು ನೀಡಲಾಗಿದೆ ಎಂದರು.

ADVERTISEMENT

ಅಕ್ರಮವಾಗಿ ಒತ್ತುವರಿ ಮಾಡಿದ್ದರೆ ತೆರವುಗೊಳಿಸುವುದಾಗಿ ತಹಶೀಲ್ದಾರ್‌ ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.