ಚನ್ನಪಟ್ಟಣದ ಪುಣ್ಯ ಆಸ್ಪತ್ರೆ ಬಳಿ ಮನೆ ಮೇಲೆ ವಾಲಿದ ವಿದ್ಯುತ್ ಕಂಬ
ಪ್ರಜಾವಾಣಿ ಚಿತ್ರ
ಚನ್ನಪಟ್ಟಣ: ತಾಲ್ಲೂಕಿನಲ್ಲಿ ಗುರುವಾರ ಧಾರಾಕಾರವಾಗಿ ಸುರಿದ ಮಳೆಗೆ ಪಟ್ಟಣದ ವಿವಿಧಢೆ ಒಂಬತ್ತು ವಿದ್ಯುತ್ ಕಂಬಗಳು ಮಧ್ಯಾಹ್ನ ಧರೆಗುರುಳಿದ್ದು, ಅದೃಷ್ಟವಷಾತ್ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಎರಡನೇ ಅಡ್ಡರಸ್ತೆಯ ಪುಣ್ಯ ಆಸ್ಪತ್ರೆ ಬಳಿ ಮಳೆಯಲ್ಲಿ ಅತೀಕ್ ಎಂಬುವರು ಕಾರಿನಲ್ಲಿ ಹೋಗುತ್ತಿದ್ದಾಗ, ಏಕಾಏಕಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಕಾರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದೆ.
ಪಕ್ಕದ ಬಡಾವಣೆಯ ಮನೆ ಮೇಲೂ ವಿದ್ಯುತ್ ಕಂಬ ಬಿದ್ದಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಅಪಾಯ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.