
ರಾಮನಗರ: ಕರ್ಫ್ಯೂ ಮೂರನೇ ದಿನವಾದ ಗುರುವಾರವೂ ಜಿಲ್ಲೆಯಲ್ಲಿ ಜನರ ಓಡಾಟ ಕಡಿಮೆ ಇದ್ದು, ಅಗತ್ಯ ವಸ್ತು ಖರೀದಿಗೆ ಸೀಮಿತಗೊಂಡಿತ್ತು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮುಂಜಾನೆ ಎಂದಿನಂತೆ ವಹಿವಾಟು ಆರಂಭಗೊಂಡಿತು. ರೈತರು ತಾವು ಬೆಳೆದ ತರಕಾರಿ, ಸೊಪ್ಪನ್ನು ನಸುಕಿನಲ್ಲೇ ಮಾರುಕಟ್ಟೆಗೆ ಹೊತ್ತು ತಂದಿದ್ದರು. ಬೆಳಿಗ್ಗೆ 6ಕ್ಕೆ ವ್ಯಾಪಾರ ಆರಂಭಗೊಂಡಿದ್ದು, 10ರವರೆಗೂ ನಡೆಯಿತು. ಜನಸಂದಣಿ ಎಂದಿನಂತೆ ಇತ್ತು. ರೇಷ್ಮೆಗೂಡು ಮಾರುಕಟ್ಟೆ ವಹಿವಾಟು ಸಹ ನಡೆದಿದ್ದು, ದೂರದ ಊರುಗಳಿಂದ ರೈತರು ಗೂಡು ತಂದಿದ್ದರು.
ಬೆಳಿಗ್ಗೆ ದಿನಸಿ ಅಂಗಡಿಗಳು, ಹಣ್ಣಿನ ಅಂಗಡಿಗಳು, ಹೂವಿನ ಮಾರುಕಟ್ಟೆ, ಹೋಟೆಲ್, ವೈನ್ ಸ್ಟೋರ್ ತೆರೆದಿದ್ದವು. ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳು ದಿನವಿಡೀ ಬಾಗಿಲು ತೆರೆದಿದ್ದವು. ಬ್ಯಾಂಕ್, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಬಂದ್ ಆಗಿದ್ದು, ಹೆದ್ದಾರಿಯಲ್ಲಿ ವಾಹನಗಳ ಓಡಾಟ ವಿರಳವಾಗಿತ್ತು. ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿ ನೀಡಿದ್ದು, ಬಿಡದಿ –ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಟುವಟಿಕೆ ಹೆಚ್ಚಿತ್ತು. ಹೆದ್ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ವಾಹನಗಳ ತಪಾಸಣೆನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.