ADVERTISEMENT

ಉಕ್ರೇನ್‌ನಲ್ಲಿ ಸಿಲುಕಿದ ರಾಮನಗರದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 13:37 IST
Last Updated 24 ಫೆಬ್ರುವರಿ 2022, 13:37 IST
ನಿವೇದಿತಾ
ನಿವೇದಿತಾ   

ರಾಮನಗರ: ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದು, ಭಾರತಕ್ಕೆ ಮರಳಲು ಪರದಾಡುತ್ತಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಚಂದ್ರಶೇಖರ್ ಎಂಬುವರ ಪುತ್ರಿ ನಿವೇದಿತಾ ಉಕ್ರೇನ್‌ನ ಜಫೋರಿಜಾಹಿಯ ಸ್ಟೇಟ್‌ ಮೆಡಿಕಲ್‌ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಮೂರನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿದ್ದಾರೆ. ಪೋಷಕರ ಜೊತೆ ವಿದ್ಯಾರ್ಥಿನಿ ಮಾತನಾಡಿದ್ದು, ‘ ಸದ್ಯ ಸುರಕ್ಷಿತವಾಗಿದ್ದೇನೆ. ಉಕ್ರೇನ್‌ನ ಎಲ್ಲ ವಿಮಾನ ನಿಲ್ದಾಣಗಳು ಮುಚ್ಚಿರುವ ಕಾರಣ ಸ್ವದೇಶಕ್ಕೆ ಬರಲು ಆಗುತ್ತಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

ರಾಮನಗರದ ಐಜೂರಿನ ನಿವಾಸಿ ಆಯೇಷಾ ಎಂಬ ವಿದ್ಯಾರ್ಥಿನಿ ಸಹ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಓದಲೆಂದು ಮೂರು ತಿಂಗಳ ಹಿಂದೆ ತೆರಳಿದ್ದರು. ಆಕೆ ಕೂಡ ಅಲ್ಲಿಯೇ ಸಿಲುಕಿದ್ದಾರೆ. ಪೋಷಕರ ಜೊತೆ ವಿಡಿಯೊ ಕಾಲ್‌ನಲ್ಲಿ ಮಾತನಾಡಿದ್ದು, ಸದ್ಯ ಉಕ್ರೇನ್‌ನಲ್ಲಿರುವ ಎಂಬೆಸ್ಸಿ ಕಚೇರಿಯಲ್ಲಿ ತಾನು ಇರುವುದಾಗಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.