ADVERTISEMENT

ರಾಮನಗರ: ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:18 IST
Last Updated 3 ಫೆಬ್ರುವರಿ 2026, 4:18 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ರಾಮನಗರ: ರೇಷ್ಮೆ ಇಲಾಖೆ ವತಿಯಿಂದ 2023-24 ಮತ್ತು 2024-25ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಗೂಡಿನ ನಂತರದ ಚಟುವಟಿಕೆ, ರಾಮನಗರ ವ್ಯಾಪ್ತಿಯಲ್ಲಿ (ರಾಮನಗರ ಮತ್ತು ಚನ್ನಪಟ್ಟಣ) ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ರೀಲರ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ADVERTISEMENT

ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಹತೆಗಳಂತೆ ಸಕ್ರಿಯ ರೀಲರ್‌ಗಳು ಚಾಲ್ತಿಯಲ್ಲಿರುವ ಪರವಾನಗಿ ಹೊಂದಿರಬೇಕು. ಸರ್ಕಾರಿ ಮಾರುಕಟ್ಟೆಗಳಲ್ಲಿಯೇ ಗೂಡು ಖರೀದಿಸಿರುವ ಬಗ್ಗೆ ಹಾಗೂ ರೇಷ್ಮೆ ವಿನಿಮಯ ಕೇಂದ್ರದಲ್ಲಿ ರೇಷ್ಮೆ ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಹೊಂದಿರಬೇಕು. ಅರ್ಹರು ಅರ್ಜಿಯನ್ನು ಫೆ. 9ರೊಳಗೆ ರಾಮನಗರದ ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಬೇಕು.

ಹೆಚ್ಚಿನ ಮಾಹಿತಿಗೆ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ, ಗೂಡಿನ ನಂತರದ ಚಟುವಟಿಕೆ, ರಾಮನಗರದ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಗೂಡಿನ ನಂತರದ ಚಟುವಟಿಕೆಗಳ ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.