ADVERTISEMENT

ಹಾರೋಹಳ್ಳಿ ತಾಲ್ಲೂಕು ಸಭಾಂಗಣದಲ್ಲಿ ಸಿದ್ಧರಾಮೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:07 IST
Last Updated 15 ಜನವರಿ 2026, 7:07 IST
ಹಾರೋಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು
ಹಾರೋಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು   

ಹಾರೋಹಳ್ಳಿ: ಹಾರೋಹಳ್ಳಿ ತಾಲ್ಲೂಕು ಸಭಾಂಗಣದಲ್ಲಿ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ಹರ್ಷವರ್ಧನ್ ಮಾತನಾಡಿ, ಶರಣರ ಮಾರ್ಗದರ್ಶನ ಬಹಳ ಮಹತ್ವದ್ದು. ಅವರ ವಚನಗಳ ಮೂಲಕ ನೀಡಿರುವ ಸಾರವನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣ ಸಿದ್ಧರಾಮೇಶ್ವರರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಭಕ್ತರು. ತಮ್ಮ ಬಾಲ್ಯದಲ್ಲಿಯೇ ದೇವರನ್ನು ಒಲಿಸಿಕೊಂಡ ಮಹಾಪುರುಷ ಎಂದರು.

ಭೋವಿ ಸಂಘರ್ಷ ಸಮಿತಿ ಉಪಾಧ್ಯಕ್ಷ ರಾಮಸಾಗರ ಕೃಷ್ಣ ಮಾತನಾಡಿ, ಸಿದ್ಧರಾಮೇಶ್ವರ ಸ್ವಾಮಿ ಸ್ವಾತಂತ್ರ್ಯಕ್ಕಾಗಿ ಸಹ ಹೋರಾಡಿದ್ದರು. ಇಂತಹ ಮಹಾನ್ ಶರಣರ ಜಯಂತಿಯನ್ನು ಬೆಂಗಳೂರಿನಲ್ಲಿ ಆಚರಿಸುವುದನ್ನು ಬಿಟ್ಟು ಮೈಸೂರಿನಲ್ಲಿ ಆಚರಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ತನ್ನ ನಿಲುವು ಬದಲಿಸಬೇಕು. ಬೆಂಗಳೂರಿನಲ್ಲಿಯೇ ಆಚರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಮೋಹನ್ ಕುಮಾರ್, ಗ್ರಾ.ಪಂ ಮಾಜಿ ಸದಸ್ಯ ಆಂಜನಪ್ಪ, ವೆಂಕಟಸ್ವಾಮಿ, ರಾಮಣ್ಣ, ಕರಿಯಪ್ಪ, ನಾಗರಾಜು, ನಾಗಣ್ಣ, ರಾಮಚಂದ್ರ, ನರಸಿಂಹಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.