ADVERTISEMENT

ಕಣ್ಣಿಗೆ ಬಟ್ಟೆ ಧರಿಸಿ ಟಿಕೆಎಂ ಕಾರ್ಮಿಕರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 21:50 IST
Last Updated 5 ಜನವರಿ 2021, 21:50 IST
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನ್ಯಾಯಕ್ಕಾಗಿ ಕಾರ್ಮಿಕರುಭಿನ್ನ ಪ್ರತಿಭಟನೆ ಮಾಡಿದರು
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನ್ಯಾಯಕ್ಕಾಗಿ ಕಾರ್ಮಿಕರುಭಿನ್ನ ಪ್ರತಿಭಟನೆ ಮಾಡಿದರು   

ಬಿಡದಿ: ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್‌ (ಟಿಕೆಎಂ)ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕರು ಮಂಗಳವಾರ ಕಣ್ಣಿಗೆಕಪ್ಪು‌ಬಟ್ಟೆಕಟ್ಟಿಕೊಂಡುಒಂದುಗಂಟೆಗೂಹೆಚ್ಚುಕಾಲಪ್ರತಿಭಟನೆ

ನಡೆಸಿದರು. ಟೊಯೊಟೊ ಆಡಳಿತ ಮಂಡಳಿಯ ಹಠಮಾರಿ ಧೋರಣೆ ಮತ್ತುರಾಜ್ಯ ಹಾಗೂಕೇಂದ್ರ ಸರ್ಕಾರಗಳ ಜಾಣ ಕುರುಡುತನಖಂಡಿಸಿ ವಿನೂತನ ಪ್ರತಿಭಟನೆ ನಡೆಸಿರುವುದಾಗಿ ಕಾರ್ಮಿಕ ಸಂಘ ಹೇಳಿದೆ.

ಬೆಂಬಲ: ಟೊಯೊಟಾ ಕಾರ್ಮಿಕರ ಹೋರಾಟ ಬೆಂಬಲಿಸಿ ತಮಿಳುನಾಡಿನಲ್ಲಿಯೂ ಸಿಐಟಿಯು ಸಹಯೋಗದೊಂದಿದೆ ಹತ್ತಾರು ಕಂಪನಿ ಕಾರ್ಮಿಕರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದಾರೆ.

ADVERTISEMENT

ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ದೆಹಲಿಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.