
ಹಾರೋಹಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮ ಮರಳವಾಡಿ ಕೋಟೆ ಗಣಪತಿ ದೇವಸ್ಥಾನದ ಶಂಕರ ಧ್ಯಾನಮಂದಿರ ಆವರಣದಲ್ಲಿ ನಡೆಯಿತು.
ಶಾಮನೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮರಳವಾಡಿ ಹೋಬಳಿ ವೀರಶೈವ, ಲಿಂಗಾಯಿತ ಸಮಾಜದ ಹಿರಿಯ ಗಣ್ಯರಿಗೆ ಗೌರವ ಸಮರ್ಪಣೆ ಇದೇ ವೇಳೆ ನಡೆಯಿತು.
ದಾವಣಗೆರೆಯನ್ನು ವಿಶ್ವದ ಭೂಪಟದಲ್ಲಿ ಗುರ್ತಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ ಎಂದು ಮರಳವಾಡಿ ಶಿವಮಠದ ಕಿರಿಯ ಸ್ವಾಮೀಜಿ ಪ್ರಭುಕಿರೀಟಿ ಹೇಳಿದರು.
ದಾವಣಗೆರೆಯನ್ನು ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯಾಗಿ ಸಮೃದ್ಧಗೊಳಿಸಿದವರು ಶಾಮನೂರು ಶಿವಶಂಕರಪ್ಪ ಎಂದು ಕನಕಪುರ ಮಹಾಸಭಾ ಅಧ್ಯಕ್ಷ ಎಂ.ಉಮಾಶಂಕರ್ ಹೇಳಿದರು.
ಸತತ ಮೂರು ಅವಧಿಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಯಾರಿಗೂ ಅಂಜದೆ, ಅಳುಕದೆ ಸಮಾಜದ ಹಿತ ಕಾಯುವ ವಿಚಾರದಲ್ಲಿ ನಿಷ್ಠುರವಾಗಿ ಮಾತನಾಡುತ್ತಿದ್ದವರು ಶಾಮನೂರು ಎಂದು ಆನೆಕಲ್ ತಾಲೂಕು ವೀರಶೈವ ಸಾಮಾಜದ ಅಧ್ಯಕ್ಷ ಹಿನ್ನಕ್ಕಿ ಜಯಣ್ಣ ಸ್ಮರಿಸಿದರು.
ಮರಳವಾಡಿ ಹೋಬಳಿ ವೀರಶೈವ ಸಮಾಜದ ಹಿರಿಯರಾದ ಮಹದೇವಯ್ಯ, ಮುಚ್ಚಂದಯ್ಯ, ಬಸವರಾಜು, ಪಟೇಲ್.ಕೆ.ವಿ.ಶಿವರುದ್ರಯ್ಯ, ತೇರುಬೀದಿ ರೇಣುಕಪ್ಪ ಸೇರಿದಂತೆ ಹಲವರಿಗೆ ಗೌರವ ಸಮರ್ಪಣೆ ನೆರವೇರಿತು.
ಕೃಷ್ಣಗಿರಿ ಜಿಲ್ಲೆ ವೀರಶೈವ ಮಹಾವೇದಿಕೆ ಅಧ್ಯಕ್ಷ ಸಿ.ಎಂ.ಗೌಡ, ದೇಗುಲಮಠದ ಶ್ರೀನಿರ್ವಾಣ ಸ್ವಾಮಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಪರಮೇಶಯ್ಯ, ಮರಳವಾಡಿ ಹೋಬಳಿ ಮಹಾಸಭಾದ ನಿರ್ದೇಶಕ ಎಂ.ಪಿ.ರುದ್ರೇಶ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.