ADVERTISEMENT

ರಾಮನಗರ | ತ್ಯಾಜ್ಯ ತಗ್ಗಿಸಲು ಜಾಗೃತಿ ಅವಶ್ಯ: ನಗರಸಭಾಧ್ಯಕ್ಷ ಕೆ.ಶೇಷಾದ್ರಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 2:23 IST
Last Updated 21 ಡಿಸೆಂಬರ್ 2025, 2:23 IST
ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಬಿಡುಗಡೆ ಮಾಡಿದರು 
ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಬಿಡುಗಡೆ ಮಾಡಿದರು    

ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ದಿನಕ್ಕೆ 40ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪ್ರಮಾಣ ಕಡಿಮೆ ಮಾಡಲು ಮನೆ, ವ್ಯಾಪಾರದಂತಹ ಮೂಲ ಸ್ಥಳಗಳಲ್ಲೇ ತ್ಯಾಜ್ಯ ಕಡಿಮೆ ಮಾಡುವುದು ಅಗತ್ಯ ಎಂಬ ಜಾಗೃತಿಗಾಗಿ ವಾಸವಿ ಕ್ಲಬ್ ರಾಮನಗರ ಕರಪತ್ರ ಬಿಡುಗಡೆ ಮಾಡಿದೆ. ಈ ಕರಪತ್ರಗಳನ್ನು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಬಿಡುಗಡೆ ಮಾಡಿದರು.

ಶೇಷಾದ್ರಿ ಮಾತನಾಡಿ, ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಯತ್ನಕ್ಕೆ ಪೂರಕವಾಗಿ ವಾಸವಿ ಕ್ಲಬ್ ಜಾಗೃತಿ ಕಾರ್ಯದಲ್ಲಿ ಮುಂದಾಗಿರುವುದು ಶ್ಲಾಘನೀಯ. ನಗರಸಭೆಯು ಭವಿಷ್ಯದ ಅಭಿಯಾನಗಳಲ್ಲಿ ಕ್ಲಬ್ ಸಹಭಾಗಿಯಾಗಲಿ ಎಂದು ಕೋರಿದರು.

ಯೂತ್ ಐಕಾನ್ ಚಿತ್ರಾರಾವ್ ಮತ್ತು ‘ಯುಧವ’ ಸಂಸ್ಥೆಯವರು ಸ್ವಚ್ಛತೆ ಜಾಗೃತಿ ಕಾರ್ಯದಲ್ಲಿ ನಗರಸಭೆ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈಗ ವಾಸವಿ ಕ್ಲಬ್ ಈ ಕಾರ್ಯಕ್ಕೆ ಸೇರಿದೆ. ಇದರಿಂದ ಸ್ವಚ್ಛ ರಾಮನಗರದ ಕನಸು ನನಸಾಗಲಿ ಎಂದು ಆಶಿಸಿದರು.

ADVERTISEMENT

ವಾಸವಿ ಕ್ಲಬ್ ಅಧ್ಯಕ್ಷ ಗಿರೀಶ್ ಕೆ.ಎನ್ ಮತ್ತು ಕಾರ್ಯದರ್ಶಿ ಹರ್ಷಿತ ಮಾತನಾಡಿ, ಪ್ರತಿ ಮನೆಯಿಂದ ವಾರಕ್ಕೆ ಕನಿಷ್ಠ ಒಂದು ಚೀಲ ಕಸ ಕಡಿಮೆ ಮಾಡಿದರೆ ನಗರದ ತ್ಯಾಜ್ಯದ ಪ್ರಮಾಣ ಗಮನಾರ್ಹವಾಗಿ ಕುಗ್ಗುತ್ತದೆ. ಈ ಹೊಣೆಗಾರಿಕೆಯನ್ನು ನಾಗರಿಕರು ವಹಿಸಿದರೆ ನಗರ ಸ್ವಚ್ಛ, ಆರೋಗ್ಯಕರವೂ ಆಗುತ್ತದೆ ಎಂದರು. 

ನಗರದಲ್ಲಿ ಇ-ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲವೆಂದು ಗಮನ ಸೆಳೆದರು. ನಗರಸಭೆಯಿಂದ ಇ-ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಹೋಟೆಲ್‌ಗಳಲ್ಲಿ ಬಳಸುವ ಪೇಪರ್, ಪ್ಲಾಸ್ಟಿಕ್ ಕವರ್‌ ‌ಬೃಹತ್ ಪ್ರಮಾಣದ ತ್ಯಾಜ್ಯವನ್ನು ಉಂಟು ಮಾಡುತ್ತದೆ. ಇದನ್ನು ತಡೆಯಲು ನಾಗರಿಕರು ಮನೆಯಿಂದ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಿಸಬೇಕು ಮತ್ತು ಹೋಟೆಲ್ ಮಾಲೀಕರು ಈ ಬಗ್ಗೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದರು.

ಪೌರಾಯುಕ್ತ ಡಾ.ಜಯಣ್ಣ, ಪೌರಸೇವಕರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ್ (ಬೆಂಕಿ), ಕರ್ನಾಟಕ ಆರ್ಯ ವೈಶ್ಯ ಮಹಾಸಭೆ ವಿಭಾಗೀಯ ಕಾರ್ಯದರ್ಶಿ ಕೆ.ವಿ.ಪ್ರಸನ್ನ ಕುಮಾರ್ ಮತ್ತು ವಾಸವಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ದಿನ ನಿತ್ಯ 40ಕ್ಕೂ ಹೆಚ್ಚು ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಈ ಪ್ರಮಾಣ ತಗ್ಗ ಬೇಕಾದರೆ ಮನೆ, ವ್ಯಾಪಾರ ಸ್ಥಳ ಇತ್ಯಾದಿ ಮೂಲ ಸ್ಥಳಗಳಲ್ಲೇ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ವಾಸವಿ ಕ್ಲಬ್ ರಾಮನಗರ ಮುಂದಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಗರಸಭೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಗರಸಭೆಗೆ ಈ ಕ್ರಮಗಳಿಗೆ ಪೂರಕವಾಗಿ ವಾಸವಿ ಕ್ಲಬ್ ರಾಮನಗರದ ಪದಾಧಿಕಾರಿಗಳು ಮತ್ತು ಸದಸ್ಯರು ತಮ್ಮದೇ ಆಲೋಚನೆಯಲ್ಲಿ ಜನ ಜಾಗೃತಿ ಮುಂದಾಗಿರುವದು ಶ್ಲಾಘನೀಯ ವಿಚಾರ ಎಂದರು. ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ನಗರಸಭೆವತಿಯಿಂದ ನಡೆಯುವ ಅಭಿಯಾನಗಳಲ್ಲಿ ವಾಸವಿ ಕ್ಲಬ್ ರಾಮನಗರ ಸಹ ಭಾಗಿಯಾಗಲಿ ಎಂದರು.

ನಾಗರೀಕರಲ್ಲಿ ಸ್ವಚ್ಚತೆಯ ಬಗ್ಗೆ ಯೂತ್ ಐಕಾನ್ ಚಿತ್ರಾರಾವ್ ಅವರು ನಗರಸಭೆಯ ರಾಯಭಾರಿಯಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಯುಧವ ಎಂಬ ಸಂಘಟನೆಯ ಪದಾಧಿಕಾರಿಗಳು ಸಹ ಈ ಜಾಗೃತಿಯಲ್ಲಿ ಭಾಗಿಯಾಗಿದ್ದಾರೆ. ಇದೀಗ ವಾಸವಿ ಕ್ಲಬ್ ರಾಮನಗರ ಕೂಡ ನಗರಸಭೆಯೊಂದಿಗೆ ಕೈಜೋಡಿಸುತ್ತಿದೆ. ಸ್ವಚ್ಚ ರಾಮನಗರದ ಕಲ್ಪನೆ ಸಾಕಾರವಾಗಲಿ ಎಂದು ಆಶಿಸಿದರು.

ವಾಸವಿ ಕ್ಲಬ್ ರಾಮನಗರದ ಅಧ್ಯಕ್ಷ ಗಿರೀಶ್.ಕೆ.ಎನ್ ಮತ್ತು ಕಾರ್ಯದರ್ಶಿ ಹರ್ಷಿತ ಮಾತನಾಡಿ ಪ್ರತಿ ಮನೆಯಲ್ಲಿ ಕನಿಷ್ಠ ವಾರಕ್ಕೆ ಒಂದು ಚೀಲ ಕಸವನ್ನಾದರೂ ಕಡಿಮೆ ಮಾಡಿದರೆ, ನಗರದಲ್ಲಿ ಹಲವಾರು ಟನ್‌ಗಳಷ್ಟು ಕಸ ಉತ್ಪಾದನೆ ಕಡಿಮೆಯಾಗುತ್ತದೆ. ನಾಗರೀಕರು ಈ ಹೊಣೆಗಾರಿಕೆಯಿಂದ ನಡೆದುಕೊಂಡರೆ, ಸ್ವಚ್ಚ ಆರೋಗ್ಯ ಮತ್ತು ಸುಂದರಾಗುತ್ತದೆ. ಹೀಗಾಗಿ ತಾವೆಲ್ಲ ಮನೆ, ಮನೆಗೂ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.

ನಗರಸಭೆ ಸಂಗ್ರಹಿಸುವ ಕಸದೊಟ್ಟಿಗೆ ನಾಗರೀಕರು ಅವಧಿ ಮೀರಿದ ಔಷಧಗಳು, ಉಪಯೋಗಿಸಿದ ಸಿರೆಂಜ್, ಸೂಜಿ, ಬ್ಯಾಂಡೇಜ್ ಇತ್ಯಾದಿ ವೈದ್ಯಕೀಯ ತ್ಯಾಜ್ಯವನ್ನು ಸಹ ವಿಲೇವಾರಿ ಮಾಡುತ್ತಿದ್ದಾರೆ. ವೈದ್ಯಕೀಯ ತ್ಯಾಜ್ಯ ವಿಷಕಾರಕ, ಪೌರಕಾರ್ಮಿಕರನ್ನು ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ವೈದ್ಯಾಲಯಗಳು, ಔಷಧಾಲಯಗಳಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹ ಮತ್ತು ವೈಜ್ಞಾನಿಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಬೇಕು ಎಂದು ವಾಸವಿ ಕ್ಲಬ್ ಪದಾದಿಕಾರಿಗಳು ಮನವಿ ಮಾಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಇ-ತ್ಯಾಜ್ಯ (ನಿರುಪಯುಕ್ತ ಎಲೆಕ್ಟಾçನಿಕ್ ಮತ್ತು ಎಲೆಕ್ಟಿçಕಲ್ ವಸ್ತುಗಳು) ವಿಲೇವಾರಿಗೂ ನಗರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ನಗರಸಭೆವತಿಯಿಂದಲೇ ಇ-ತ್ಯಾಜ್ಯ ಸಂಗ್ರಹಣೆಗೆ ಕೇಂದ್ರವೊAದನ್ನು ಸ್ಥಾಪಿಸಬೇಕು ಎಂದು ವಾಸವಿ ಕ್ಲಬ್ ಪದಾಧಿಕಾರಿಗಳು ಮನವಿ ಮಾಡಿದರು.

ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಬಳಕೆಯಾಗುವ ಪೇಪರ್, ಪ್ಲಾಸ್ಟಿಕ್ ಕವರ್ ಇತ್ಯಾದಿ ಕೂಡ ಹಲವಾರು ಕೇಜಿಗಳಷ್ಟು ಪ್ರಮಾಣದಲ್ಲಿ ಇರಲಿವೆ. ಇದು ಕೂಡ ತ್ಯಾಜ್ಯವಾಗಿ ಮಾರ್ಪಾಟಾಗುತ್ತಿದೆ. ಇದನ್ನು ತಡೆಯಲು ನಾಗರೀಕರು ಆಹಾರ ಪದಾರ್ಥಗಳ ಪಾರ್ಸಲ್‌ಗೆ ಮನೆಯಿಂದಲೆ ಪಾತ್ರೆಗಳನ್ನು ತೆಗೆದುಕೊಂಡು ಹೋಗಬೇಕು. ಈ ವಿಚಾರದಲ್ಲಿ ಹೋಟೆಲ್ ಮಾಲೀಕರು ಸಹ ತಮ್ಮ ಗ್ರಾಹಕರನ್ನು ಪಾತ್ರೆ ತರಲು ಪ್ರೋತ್ಸಾಹಿಸಬೇಕಾಗಿದೆ. ನಗರಸಭೆವತಿಯಿಂದಲೇ ಹೋಟೆಲ್ ಮಾಲೀಕರಿಗೆ ತಿಳುವಳಿಕೆ ನೀಡಬೇಕು ಎಂದು ವಾಸವಿ ಕ್ಲಬ್‌ನ ಪದಾಧಿಕಾರಿಗಳು ನಗರಸಭಾಧ್ಯಕ್ಷರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಉಪಯುಕ್ತ ಸಲಹೆಗಳಿದ್ದು, ಪರಿಗಣಿಸುವುದಾಗಿ ತಿಳಿಸಿದರು. ಈ ವೇಳೆ ಪೌರಾಯುಕ್ತ ಡಾ.ಜಯಣ್ಣ, ಪೌರಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ್ (ಬೆಂಕಿ), ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ವಿಭಾಗೀಯ ಕಾರ್ಯದರ್ಶಿ ಕೆ.ವಿ.ಪ್ರಸನ್ನ ಕುಮಾರ್ ಮತ್ತು ವಾಸವಿ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.