ಕನಕಪುರ: ಎರಡು ವಾಹನಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ನೀರಗಂಟಿ ಸಾವನ್ನಪ್ಪಿದ್ದಾರೆ.
ಅಚ್ಚಲು ಗ್ರಾಮ ಪಂಚಾಯಿತಿ ವಡ್ಲೆಗೌಡನದೊಡ್ಡಿ ವೆಂಕಟಪ್ಪ(57) ಮೃತರು. ಅವರಿಗೆ ಪತ್ನಿ ಹಾಗೂ ಮಕ್ಕಳಿದ್ದಾರೆ. ಇವರು ವಡ್ಲೇಗೌಡನದೊಡ್ಡಿಯಲ್ಲಿ ನೀರಗಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎಡಮಾರನಹಳ್ಳಿಯಲ್ಲಿ ನೀರಗಂಟಿ ಇಲ್ಲದ ಕಾರಣ ಕಳೆದ ಆರು ತಿಂಗಳಿಂದ ನೀರಗಂಟಿಯಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ವಡ್ಲೆಗೌಡನದೊಡ್ಡಿಯಿಂದ ಎಡಮಾರನಹಳ್ಳಿ ಗ್ರಾಮಕ್ಕೆ ಸ್ಕೂಟರ್‌ನಲ್ಲಿ ಹೋಗಿ ವಾಪಸ್ ಬರುವಾಗ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ವಾಹನ ಡಿಕ್ಕಿ ಹೊಡೆದಿದೆ.
ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.