
ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ ಧ್ವಂಸವಾಗಿರುವ ತೆಂಗುಬೆಳೆ
ಚನ್ನಪಟ್ಟಣ: ತಾಲ್ಲೂಕಿನ ಹರಿಸಂದ್ರ ಹಾಗೂ ನೀಲಸಂದ್ರ ಗ್ರಾಮಗಳ ತೋಟಗಳಲ್ಲಿ ಗುರುವಾರ ರಾತ್ರಿ ಐದಾರು ಕಾಡಾನೆಗಳ ಹಿಂಡು ದಾಳಿ ನಡೆಸಿ ತೆಂಗು, ರಾಗಿ, ಟೊಮ್ಯಾಟೊ ಬೆಳೆಗಳನ್ನು ಧ್ವಂಸ ಮಾಡಿವೆ.
ನೀಲಸಂದ್ರ ಗ್ರಾಮದ ದೊಡ್ಡಸಿದ್ದಯ್ಯ ಅವರ ತೆಂಗು ಮತ್ತು ಟೊಮ್ಯಾಟೊ ಬೆಳೆ, ಹರಿಸಂದ್ರ ಗ್ರಾಮದ ರಮೇಶ್ ಅವರ ರಾಗಿ ಬೆಳೆ ಆನೆಗಳ ದಾಳಿಗೆ ಸಂಪೂರ್ಣ ಧ್ವಂಸವಾಗಿವೆ. ಇದರ ಜೊತೆಗೆ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳ ಮೇಲೂ ಆನೆಗಳು ದಾಳಿ ಮಾಡಿವೆ. ಇದರಿಂದ ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆಗಳು ಧ್ವಂಸವಾಗಿವೆ ಎಂದು ಅಂದಾಜಿಸಲಾಗಿದೆ.
ತೆಂಗಿನಕಲ್ಲು ಅರಣ್ಯಪ್ರದೇಶದಿಂದ ಆಗಮಿಸಿರುವ ಆನೆಗಳ ಹಿಂಡು ರಾತ್ರಿಯ ವೇಳೆ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಜೊತೆಗೆ ಆನೆಗಳನ್ನು ಕಾಡಿಗೆ ಶಾಶ್ವತವಾಗಿ ಅಟ್ಟಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.