ADVERTISEMENT

ಚನ್ನಪಟ್ಟಣ | ಮಹಿಳಾ ಆರ್ಥಿಕ ಸ್ವಾವಲಂಬನೆಗೆ ಒತ್ತು: ಗೀತಾಂಜಲಿ ಅಭಿಲಾಷ್

ಅಭ್ಯುದಯ ಮಹಿಳಾ ಸಹಕಾರ ಬ್ಯಾಂಕ್ ವಾರ್ಷಿಕ ಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 2:46 IST
Last Updated 14 ಸೆಪ್ಟೆಂಬರ್ 2025, 2:46 IST
ಚನ್ನಪಟ್ಟಣದಲ್ಲಿ ಅಭ್ಯುದಯ ಮಹಿಳಾ ಸಹಕಾರ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ನಡೆಯಿತು. ಬ್ಯಾಂಕ್‌ ಉಪಾಧ್ಯಕ್ಷೆ ರೂಪ ಸುಬ್ಬೇಗೌಡ, ನಿರ್ದೇಶಕರು ಹಾಜರಿದ್ದರು
ಚನ್ನಪಟ್ಟಣದಲ್ಲಿ ಅಭ್ಯುದಯ ಮಹಿಳಾ ಸಹಕಾರ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ನಡೆಯಿತು. ಬ್ಯಾಂಕ್‌ ಉಪಾಧ್ಯಕ್ಷೆ ರೂಪ ಸುಬ್ಬೇಗೌಡ, ನಿರ್ದೇಶಕರು ಹಾಜರಿದ್ದರು   

ಚನ್ನಪಟ್ಟಣ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಕಟ್ಟಿದ ಬ್ಯಾಂಕ್ ಪ್ರಗತಿಪಥದಲ್ಲಿ ಸಾಗುತ್ತಿದೆ. ಸಾವಿರಾರು ಮಹಿಳೆಯರು ಸಾಲ ಪಡೆದು ಕಿರು ಉದ್ಯಮ ನಡೆಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದು ಅಭ್ಯುದಯ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ ಗೀತಾಂಜಲಿ ಅಭಿಲಾಷ್ ತಿಳಿಸಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್‌ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ಸಹಕಾರಿ ಧುರೀಣರಾದ ವಿಜಯಲಕ್ಷ್ಮಿ ರಾಮಣ್ಣ  ಸ್ಥಾಪಿಸಿದ ಈ ಬ್ಯಾಂಕ್ ಈಗಾಗಲೇ ಬೆಳ್ಳಿ ಮಹೋತ್ಸವ ಆಚರಿಸಿದೆ ಎಂದು ತಿಳಿಸಿದರು.

ಛಾಪಾ ಕಾಗದ ವಹಿವಾಟಿನಲ್ಲಿ ಬ್ಯಾಂಕ್ ಮೊದಲ ಸಾಲಿನಲ್ಲಿದೆ. ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸೇರಿದಂತೆ ಹಲವು ಸೌಲಭ್ಯ ಬ್ಯಾಂಕ್‌ ಒಳಗೊಂಡಿದೆ. ಸದಸ್ಯರು ಹೆಚ್ಚಿನ ವಹಿವಾಟು ನಡೆಸುವ ಮೂಲಕ ಬ್ಯಾಂಕ್ ಬಲಗೊಳಿಸಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಬೆಳೆದು ಬಂದಿದೆ. ಪ್ರಸುತ್ತ ಸಾಲ ವಸೂಲಾತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಳೆ ಸಾಲ ಮರುಪಾವತಿಸಿದರೆ ಹೊಸ ಸಾಲ ಹಾಗೂ ಮತ್ತೊಬ್ಬರಿಗೆ ಸಾಲ ನೀಡಲು ಅನುಕೂಲವಾಗಲಿದೆ. ಬ್ಯಾಂಕ್‌ನಿಂದ ಸಾಲ ಪಡೆದಿರುವ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷೆ ರೂಪ ಸುಬ್ಬೇಗೌಡ, ನಿರ್ದೇಶಕರಾದ ರೇಖಾ ಉಮಾಶಂಕರ್, ಜಯಮಾಲ ಮಹಾಲಿಂಗು, ಆಶಾ ನಾಗೇಶ್, ನಿಂಗರಾಜಮ್ಮ ಲಕ್ಷ್ಮೀಪತಿ, ಸುಕನ್ಯ ರಾಜಶೇಖರ್, ಭಾಗ್ಯ ನಾಗರಾಜು, ಸಾವಿತ್ರಮ್ಮ ಕೃಷ್ಣಪ್ಪ, ಕೋಕಿಲಾ ರಾಣಿ ಜಗದೀಶ್, ಲಕ್ಷ್ಮಿ ಯಾಲಕ್ಕಿಗೌಡ, ಸುಷ್ಮಾ ಬಿಳಿಯಪ್ಪ, ಮಧುಶ್ರೀ ಭರತ್, ಪೂರ್ಣಿಮಾ ರಾಜಶೇಖರ್, ಕಾಳಮ್ಮ ಮುನಿಯಪ್ಪ, ಸಿಇಒ ವಿದ್ಯಾಶ್ರೀ, ಸಿಬ್ಬಂದಿ ರಾಜೇಂದ್ರ, ಸವಿತಾ, ನಿಶ್ಚಿತ, ಶಶಿಕಲಾ, ನಾಗೇಂದ್ರ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.