ರಾಮನಗರ: ಪ್ರೇಮಿಗಳ ದಿನಕ್ಕೆ ವಂಡರ್ ಲಾ ವಿಶೇಷ ಕೊಡುಗೆ ಘೋಷಿಸಿದೆ. ಫೆ.7ರಿಂದ 14ರವೆರೆಗೆ ವಿಶೇಷ ರಸದೌತಣ ನೀಡಲಿದೆ. ತಮ್ಮ ಪ್ರೀತಿ ಪಾತ್ರರೊಂದಿಗೆ ಪ್ರೀತಿ ಹಂಚಿಕೊಳ್ಳಲು ಉತ್ತಮ ವಾತಾವರಣ ಸೃಷ್ಟಿಸುವ ಉದ್ದೇಶದೊಂದಿಗೆ ಸಂಗೀತ ಸಂಜೆ ಆಯೋಜಿಸಿದೆ.
ಫೆ.15 ಮತ್ತು 16ರಂದು ಸಿಂಗಲ್ಸ್ ಡೇ ಆಯೋಜಿಸಿದೆ. 15 ರಂದು ಏಕಾಂಗಿ ವ್ಯಕ್ತಿಗಳಿಗಾಗಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡರೆ ವಾಹನ ನಿಲುಗಡೆ ಹಾಗೂ ಆಹಾರ, ಟಿಕೆಟ್ ಕಾಂಬೊಗಳ ಮೇಲೆ ಶೇ.35ರಷ್ಟು ರಿಯಾಯಿತಿ ಪಡೆಯಬಹುದು.
ಮಾಹಿತಿಗೆ 80372 30333/99455 57777 ಸಂಪರ್ಕಿಸಬಹುದು ಎಂದು ವಂಡರ್ ಲಾ ಹಾಲಿಡೇಸ್ ಕಾರ್ಯನಿರ್ವಾಹಕ ಮುಖ್ಯಸ್ಥ ಅರುಣ್ ಕೆ. ಚಿಟ್ಟಿಲಪಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.