ADVERTISEMENT

344 ಮಂದಿಗೆ ಸೋಂಕು 326 ಜನರು ಗುಣಮುಖ

3627 ಜನರ ವರದಿ ನೆಗೆಟಿವ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:28 IST
Last Updated 1 ಅಕ್ಟೋಬರ್ 2020, 8:28 IST

ಶಿವಮೊಗ್ಗ:ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 4012 ಜನರ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದ್ದು, 3627 ಜನರ ವರದಿ ನೆಗೆಟಿವ್ ಬಂದಿದೆ. 344 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 326 ಮಂದಿ ಗುಣಮುಖರಾಗಿದ್ದಾರೆ. 4 ಜನ ಮೃತಪಟ್ಟಿದ್ದಾರೆ.

ಮನೆಯಲ್ಲಿ 1,212 ಸೇರಿ ಒಟ್ಟು 2023 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದುವರೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 293ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 15,839ಕ್ಕೆ ತಲುಪಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 133 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿಯಲ್ಲಿ 27, ಶಿಕಾರಿಪುರದಲ್ಲಿ 52, ತೀರ್ಥಹಳ್ಳಿಯಲ್ಲಿ 33, ಸೊರಬ 46, ಸಾಗರದಲ್ಲಿ 19, ಹೊಸನಗರದಲ್ಲಿ 31 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದ ಮೂವರಲ್ಲಿ ಸೋಂಕು ಖಚಿತಪಟ್ಟಿದೆ.

ADVERTISEMENT

19 ಜನರಿಗೆ ಕೊರೊನಾ
ಸಾಗರ ವರದಿ:
ತಾಲ್ಲೂಕಿನಲ್ಲಿ ಬುಧವಾರ 19 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಗ್ರಾಮಾಂತರದಲ್ಲಿ 14, ನಗರ ವ್ಯಾಪ್ತಿಯಲ್ಲಿ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 739 ಕ್ಕೇರಿದ್ದು 450 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.