ರಿಪ್ಪನ್‌ಪೇಟೆ: ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸುಮಾರು 3,500 ವರ್ಷಗಳ ಹಿಂದಿನ ಡೋಲೆರೈಟ್ ಕಲ್ಲಿನ ಉಂಗುರವನ್ನು ಶಿಕ್ಷಕ ಹನುಮಂತಪ್ಪ ಪತ್ತೆ ಮಾಡಿದ್ದಾರೆ.
ಈ ಪ್ರದೇಶದಲ್ಲಿ ನೆಲೆಗೊಂಡಿದ್ದ ಮಾನವನ ಜೀವನಕ್ರಮದ ಆರಂಭಿಕ ದಿನಗಳಿಗೆ ಈ ಉಂಗುರ ಸಾಕ್ಷಿಯಂತಿದೆ. ಇದನ್ನು ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ಮೀನು ಹಿಡಿಯಲು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಮತ್ತು ಮಣಿಗಳಿಗೆ ಹೊಳಪು ನೀಡಲು ಬಳಸಲಾಗುತ್ತಿತ್ತು ಎಂದು ಇತಿಹಾಸ ಸಂಶೋಧಕ ಅಜಯ್ ಶರ್ಮ ತಿಳಿಸಿದ್ದಾರೆ.
ಶಾಲೆಯ ಬಳಿ ಪತ್ತೆಯಾದ ಈ ಕಲ್ಲು ಕ್ರಿ.ಪೂ. 1500ರಿಂದ ಕ್ರಿ.ಪೂ.800 (ಸಾಮಾನ್ಯ ಯುಗದ ಮೊದಲು)ರ ಕಾಲದ್ದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.