ADVERTISEMENT

ಶಿವಮೊಗ್ಗ: ಕಾರ್ಮಿಕರ ಪುತ್ರ ಸೇರಿ 67 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ

ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 12:19 IST
Last Updated 29 ಜುಲೈ 2020, 12:19 IST
ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬುಧವಾರ 10 ಸ್ವರ್ಣ ಪದಕ ಪಡೆದ ಕನ್ನಡ ಸ್ನಾತಕೋತ್ತರ ವಿಭಾಗದ ಎಚ್‌.ರಂಗನಾಥ್ ಅವರನ್ನು ತಾಯಿ–ತಂದೆ ಮುದ್ದಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬುಧವಾರ 10 ಸ್ವರ್ಣ ಪದಕ ಪಡೆದ ಕನ್ನಡ ಸ್ನಾತಕೋತ್ತರ ವಿಭಾಗದ ಎಚ್‌.ರಂಗನಾಥ್ ಅವರನ್ನು ತಾಯಿ–ತಂದೆ ಮುದ್ದಿಸಿದರು.   

ಶಿವಮೊಗ್ಗ: ಚನ್ನಗಿರಿ ತಾಲ್ಲೂಕು ಮರವಂಜಿ ತಾಂಡಾದ ಕೂಲಿ ಕಾರ್ಮಿಕ ದಂಪತಿಯ ಪುತ್ರ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ 10 ಸ್ವರ್ಣ ಪದಕ ಮುಡಿಗೇರಿಸಿಕೊಂಡರು.

ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯಲ್ಲಿ ಬುಧವಾರ ನಡೆದ 30ನೇ ಘಟಿಕೋತ್ಸವದಲ್ಲಿ ಗಣ್ಯರು ಪದಕ ಹಾಗೂ ಮೂರು ನಗದು ಬಹುಮಾನ ಪ್ರದಾನ ಮಾಡಿದರು.

ಹೂನ್ಯಾನಾಯ್ಕ– ಗಂಗೀಬಾಯಿ ದಂಪತಿಯ ಮೂವರು ಮಕ್ಕಳಲ್ಲಿ ರಂಗನಾಥ್ ಕೊನೆಯ ಮಗ. ಒಂದು ಎಕರೆ ಸ್ವಂತ ಜಮೀನು ಇದ್ದು,ಈ ದಂಪತಿ ನಿತ್ಯವೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಾವು ಬಡತನದ ಬೇಗೆಯಲ್ಲಿ ಬೆಂದರೂ ಮಕ್ಕಳಿಗೆ ಉನ್ನತಶಿಕ್ಷಣ ಕೊಡಿಸಿದ್ದಾರೆ.ಪ್ರಸ್ತುತ ಕುವೆಂಪು ವಿಶ್ವವಿದ್ಯಾಲಯದಲ್ಲೇಪಿಎಚ್‌.ಡಿ ಪ್ರವೇಶಕ್ಕೆ ಆಯ್ಕೆಯಾಗಿರುವ ಅವರು ಉತ್ತಮ ಪ್ರಾಧ್ಯಾಪಕನಾಗುವ ಇಚ್ಛೆಇಟ್ಟುಕೊಂಡಿದ್ದಾರೆ.

ADVERTISEMENT

ಶಿವಮೊಗ್ಗದ ವರ್ತಕ ಮಹಮದ್‌ ಫೈರೋಜ್ ಪುತ್ರಿ ರುಖಯ್ಯಾ ಬಿ.ಕಾಂನಲ್ಲಿ, ಮೂಡಿಗೆರೆಯ ಕಾಫಿ ಬೆಳೆಗಾರಎಂ.ಬಿ. ರಮೇಶ್ ಅವರ ಪುತ್ರಿ ಎಂಎಸ್ಸಿ ಜೈವಿಕ ತಂತ್ರಜ್ಞಾನದಲ್ಲಿ ತಲಾಐದು ಚಿನ್ನದ ಪದಕಪಡೆದಿದ್ದಾರೆ.

ಘಟಿಕೋತ್ಸವದಲ್ಲಿ 23,732 ವಿದ್ಯಾರ್ಥಿಗಳು ಪದವಿಗೆ ಅರ್ಹರಾದರು. 194 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪ್ರಧಾನ ಮಾಡಲಾಯಿತು.67 ವಿದ್ಯಾರ್ಥಿಗಳು119 ಸ್ವರ್ಣ ಪದಕ ಹಂಚಿಕೊಂಡರು. ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಗೈರುಹಾಜರಾಗಿದ್ದರು. ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಕಲಪತಿ ಪಿ.ವಿ. ಕೃಷ್ಣ ಭಟ್ಅವರಘಟಿಕೋತ್ಸವ ಮುದ್ರಿತ ಭಾಷಣವನ್ನು ವೇದಿಯಲ್ಲಿ ಪ್ರಸಾರ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.