ADVERTISEMENT

ಕ್ರಿಕೆಟ್: ಎ.ಟಿ.ಎನ್.ಸಿ ಸಂಜೆ ಕಾಲೇಜು ತಂಡ ಗೆಲುವು

ಶಿವಮೊಗ್ಗ: ಎನ್ಇಎಸ್ ಕ್ರೀಡೋತ್ಸವ ಸಮಾರೋಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:52 IST
Last Updated 3 ಫೆಬ್ರುವರಿ 2026, 2:52 IST
ಶಿವಮೊಗ್ಗದಲ್ಲಿ ಎನ್‌ಇಎಸ್ ಕ್ರೀಡಾಕೂಟದ ಉದ್ಘಾಟನೆ ವೇಳೆ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್‌.ನಾರಾಯಣ ರಾವ್ ಗೌರವ ವಂದನೆ ಸ್ವೀಕರಿಸಿದರು
ಶಿವಮೊಗ್ಗದಲ್ಲಿ ಎನ್‌ಇಎಸ್ ಕ್ರೀಡಾಕೂಟದ ಉದ್ಘಾಟನೆ ವೇಳೆ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್‌.ನಾರಾಯಣ ರಾವ್ ಗೌರವ ವಂದನೆ ಸ್ವೀಕರಿಸಿದರು   

ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಭಾನುವಾರ ಜೆ.ಎನ್.ಎನ್.ಸಿ.ಇ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎನ್ಇಎಸ್ ಕ್ರೀಡೋತ್ಸವದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಚಾರ್ಯ ತುಳಸಿ‌ ರಾಷ್ಟ್ರೀಯ ವಾಣಿಜ್ಯ ಸಂಜೆ‌ ಕಾಲೇಜು ತಂಡ ಗೆಲುವು ಸಾಧಿಸಿದೆ. ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ತಂಡ ರನ್ನರ್‌ ಅಪ್ ಶ್ರೇಯ ಪಡೆಯಿತು.

ಪುರುಷ ವಾಲಿಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಟ್ರಾನ್ಸ್‌ಪೋರ್ಟ್‌ ವಿಭಾಗ (ಪ್ರಥಮ), ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು (ದ್ವಿತೀಯ), ಶಟಲ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಫಾರ್ಮಸಿ ಕಾಲೇಜು (ಪ್ರಥಮ), ಜೆ.ಎನ್.ಎನ್.ಸಿ.ಇ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ (ದ್ವಿತೀಯ) ಸ್ಥಾನ ಪಡೆದಿದೆ.

ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಮಹಿಳಾ ತಂಡ (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ ಮಹಿಳಾ - ಬಿ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ- ಎ ತಂಡ (ಪ್ರಥಮ), ಜೆ.ಎನ್.ಎನ್.ಸಿ.ಇ- ಬಿ ತಂಡ (ದ್ವಿತೀಯ), ಶಟಲ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ (ಪ್ರಥಮ), ಕಸ್ತೂರಬಾ ಪಿಯು ಕಾಲೇಜು (ದ್ವಿತೀಯ), ಟೆನಿಕಾಯಿಟ್ ಸ್ಪರ್ಧೆಯಲ್ಲಿ ಎಚ್‌.ಎಸ್ ರುದ್ರಪ್ಪ ಪಿಯು ಕಾಲೇಜು (ಪ್ರಥಮ), ಕಮಲಾ‌ ನೆಹರು ಮಹಿಳಾ ಕಾಲೇಜು (ದ್ವಿತೀಯ) ಸ್ಥಾನ ಪಡೆದಿದೆ.

ADVERTISEMENT

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಅನಂತದತ್ತಾ, ಎಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಸುಧೀರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಜೆ.ಎನ್.ಎನ್.ಸಿ.ಇ ಸಂಶೋಧನಾ ಡೀನ್  ಎಸ್.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು.

ಸಂಪಾದನೆ ಎಂದರೆ ಹಣವೆಂದು ಮಾತ್ರ ಅರ್ಥೈಸಿಕೊಳ್ಳುತ್ತೇವೆ. ಅನುಬಂಧ ಅನುಭಾವ ಹೃದಯ ಶ್ರೀಮಂತಿಕೆ ಇವೇ ನಿಜವಾದ ಸಂಪಾದನೆ. ಕ್ರೀಡೋತ್ಸವದ ಮೂಲಕ ಸಂಸ್ಥೆಯ ಅಮೂಲ್ಯ ಮಾನವ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳೋಣ
ಜಿ.ಎಸ್.ನಾರಾಯಣ ರಾವ್ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ

ಮ್ಯಾರಥಾನ್ ಮೂಲಕ ಏಕತೆಯ ಹೆಜ್ಜೆ..

ಬೆಳ್ಳಂ ಬೆಳಿಗ್ಗೆ ಒಂದೆಡೆ ಸೇರಿದ್ದ ಎನ್ಇಎಸ್ ಸಿಬ್ಬಂದಿ ವರ್ಗ 4 ಕಿ.ಮಿ ದೂರ ಮ್ಯಾರಥಾನ್ ಮೂಲಕ ಏಕತೆಯ ಹೆಜ್ಜೆ ಹಾಕಿದರು. ಎನ್ಇಎಸ್ ಕ್ರೀಡಾಂಗಣದಿಂದ ಹೊರಟ ಸಿಬ್ಬಂದಿಗಳು ವಯಸ್ಸಿನ ಅರಿವಿಲ್ಲದಂತೆ ಚೈತನ್ಯ ಪೂರ್ಣರಾಗಿ ಭಾಗವಹಿಸಿದ್ದರು. ನಂತರ ನಡೆದ ಪಥ ಸಂಚಲನದಲ್ಲಿ ಆಡಳಿತ ಕಛೇರಿ ಸೇರಿದಂತೆ 36 ವಿದ್ಯಾಸಂಸ್ಥೆಗಳ 1800 ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.