ಶಿವಮೊಗ್ಗ: ‘ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಬಂಗಾರಪ್ಪ ಅವರ ಹೆಸರನ್ನು ಸರ್ಕಾರದ ಯಾವುದಾದರೂ ಯೋಜನೆಗೆ ಇಡಬೇಕು’ ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಈ ಸಂಬಂಧ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ ಅವರು, ಯೋಜನೆಗೆ ಹೆಸರಿಡುವ ಮೂಲಕ ಹಿಂದುಳಿದ ವರ್ಗದ ನೇತಾರರಾಗಿದ್ದ ಬಂಗಾರಪ್ಪ ಅವರ ಹೆಸರು ಅಜರಾಮರವಾಗಿಸಬೇಕು ಎಂದು ಕೋರಿದ್ದಾರೆ.
‘ಅ.26 ರಂದು ಬಂಗಾರಪ್ಪ ಅವರ 93ನೇ ಜನ್ಮದಿನ. ಈ ಸಂದರ್ಭದಲ್ಲಿ ರಾಜ್ಯದ ಒಂದು ಸರ್ಕಾರಿ ಯೋಜನೆಗೆ ಅವರ ಹೆಸರು ಇಟ್ಟರೆ ಅವರಿಗೆ ಹಾಗೂ ಆ ಮೂಲಕ ಇಡೀ ಹಿಂದುಳಿದ ಸಮುದಾಯಕ್ಕೆ ಗೌರವವನ್ನು ಸಲ್ಲಿಸಿದಂತಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಂಗಾರಪ್ಪ ಅವರು ಜಾರಿಗೆ ತಂದಿದ್ದ ‘ಆಶ್ರಯ’, ‘ಆರಾಧನಾ’, ‘ವಿಶ್ವ’ ಯೋಜನೆಗಳ ಮೂಲಕ ಜನರು ಅವರನ್ನು ಸದಾ ಸ್ಮರಿಸುತ್ತಿದೆ. ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಬಂಗಾರಪ್ಪ ಅವರನ್ನು ನಿರ್ಲಕ್ಷಿಸಿವೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.