ADVERTISEMENT

ರಾಜೀನಾಮೆ ನೀಡಿದ್ದು ನಾನಾ, 17 ಶಾಸಕರಾ? ಅವರೇನು ಹಾಲು ಕುಡಿವ ಮಕ್ಕಳಾ?: ಸಿದ್ದು

ಸಂವಿಧಾನದ ಆಶಯಗಳೇ ಗೊತ್ತಿಲ್ಲದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 20:30 IST
Last Updated 5 ನವೆಂಬರ್ 2019, 20:30 IST
   

ಶಿವಮೊಗ್ಗ: ಸಂವಿಧಾನದ ಆಶಯಗಳೇ ಗೊತ್ತಿಲ್ಲದ ಬಿಜೆಪಿ ಮುಖಂಡರು ಸಂವಿಧಾನ ರಕ್ಷಿಸಲು ಸಾಧ್ಯವೇ? ಚುನಾಯಿತ ಸರ್ಕಾರ ಬೀಳಿಸುವ ಮೂಲಕ ಅಧಿಕಾರ ಹಿಡಿದ ಅವರಿಗೆಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುವುದೇ ಕೆಲಸ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಕಾಂಗ್ರೆಸ್ಜಿಲ್ಲಾ ಘಟಕಮಂಗಳವಾರ ಆಯೋಜಿಸಿದ್ದ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಿಗ್ಗೆ ಒಂದು ಪಕ್ಷ, ಸಂಜೆಮತ್ತೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವ ಶಾಸಕರಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆಜಾರಿಗೆ ತರಲಾಗಿತ್ತು.ಮಿಸ್ಟರ್‌ ಯಡ್ಡಿಯೂರಪ್ಪ, ಮಿಸ್ಟರ್‌ ಈಶ್ವರಪ್ಪ ನೀವು ಸಂವಿಧಾನ ಓದಿಕೊಂಡಿದ್ದೀರಾ?’ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಿಮ್ಮ ಬಣ್ಣ ಈಗ ಬಯಲಾಗುತ್ತಿದೆ. ಯಡಿಯೂರಪ್ಪ ಅವರ ಆಡಿಯೊಸಾಕ್ಷ್ಯ ಸುಪ್ರೀಂ ಕೋರ್ಟ್ ಪರಿಗಣಿಸುತ್ತದೆ. ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರಕ್ರಮ ಕೋರ್ಟ್‌ ಎತ್ತಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲುಬಿಜಿಪಿಯವರೇ ಆಡಿಯೊಟೇಪ್ ವೈರಲ್ ಮಾಡಿದ್ದಾರೆ. 17 ಶಾಸಕರು ರಾಜೀನಾಮೆ ನೀಡಿದ ಹಿಂದಿನ ಮರ್ಮ ಬಯಲಾಗಿದೆ. ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯ ಎನ್ನುವ ಇವರಿಗೆ ಬುದ್ದಿ ಇದೆಯಾ? ರಾಜೀನಾಮೆ ನೀಡಿದ್ದು ನಾನಾ,17 ಶಾಸಕರಾ? ಅವರೆನು ಹಾಲು ಕುಡಿಯುವ ಮಕ್ಕಳಾ? ಸಣ್ಣವರಾ ಎಂದು ತಿರುಗೇಟು ನೀಡಿದರು.

ಕೇಂದ್ರದಿಂದ ಸೂಕ್ತ ನೆರೆಪರಿಹಾರ ತರಲೂ ಆಗದ ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ‌.ಈಚೆಗೆ ಅವರು ಮುಳ್ಳಿನ ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳಿದ್ದರು. ಪಾಪ ವಯಸ್ಸಾಗಿದೆ. ಬಿದ್ದು ಹೆಚ್ಚು ಕಡಿಮೆ ಮಾಡಿಕೊಂಡರೆ ಕಷ್ಟ ಎಂದು ರಾಜೀನಾಮೆ ಕೊಡಲು ಹೇಳಿದೆ. ಅದಕ್ಕೆ ನನ್ನನ್ನು ದುರಾಹಾಂಕಾರಿ ಎನ್ನುತ್ತಾರೆ. ಈಶ್ವರಪ್ಪಅವರಮೆದುಳು ಮತ್ತು ನಾಲಿಗೆಗೆಸಂಪರ್ಕವೇ ಇಲ್ಲ ಎಂದು ವ್ಯಂಗ್ಯವಾಡಿದರು.

‘ನೋ ಟಾಸ್ಕ್ ನೋ ಫೋರ್ಸ್‌’
ಮಲೆನಾಡಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಳಪೆ ಗುಣಮಟ್ಟದಆಮದು ಅಡಿಕೆನಿಯಂತ್ರಿಸಬೇಕಿತ್ತು.ಅದುಬಿಟ್ಟುಅಡಿಕೆ ಬೆಳೆಗೆ ಟಾಸ್ಕ್‌ಫೊರ್ಸ್ ರಚಿಸಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರಅವರು ಅಧ್ಯಕ್ಷರು.ಅವರಿಗೆ ಟಾಸ್ಕ್‌ ಏನು ಎಂಬುದೇ ತಿಳಿದಿಲ್ಲ. ಇನ್ನೇನು ಫೋರ್ಸ್‌ ಮಾಡುತ್ತಾರೆ. ಇದು‘ನೋ ಟಾಸ್ಕ್ ನೋ ಫೋರ್ಸ್‌’ ಎಂದುಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.