ADVERTISEMENT

ಮಕ್ಕಳಲ್ಲಿ ಕಲೆಯ ಆಸಕ್ತಿ ಬೆಳೆಸಿ: ಡಿ. ಮಂಜುನಾಥ

ಜಾನಪದ ಪರಿಷತ್ತು ಉದ್ಘಾಟನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:14 IST
Last Updated 3 ಮೇ 2022, 5:14 IST
ಭದ್ರಾವತಿ ಕರ್ನಾಟಕ ಜಾನಪದ ಪರಿಷತ್ತು ಘಟಕವನ್ನು ಉದ್ಯಮಿ ಬಿ.ಕೆ. ಜಗನ್ನಾಥ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕೊಡ್ಲುಯಜ್ಞಯ್ಯ ಉಪಸ್ಥಿತರಿದ್ದರು.
ಭದ್ರಾವತಿ ಕರ್ನಾಟಕ ಜಾನಪದ ಪರಿಷತ್ತು ಘಟಕವನ್ನು ಉದ್ಯಮಿ ಬಿ.ಕೆ. ಜಗನ್ನಾಥ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕೊಡ್ಲುಯಜ್ಞಯ್ಯ ಉಪಸ್ಥಿತರಿದ್ದರು.   

ಭದ್ರಾವತಿ: ‘ಮೊಬೈಲ್, ದೂರದರ್ಶನ ವೀಕ್ಷಣೆಯಿಂದ ಮಕ್ಕಳನ್ನು ದೂರವಿಟ್ಟು ಜಾನಪದ ಕಲೆಯತ್ತ ಆಸಕ್ತಿ ಮೂಡಿಸುವ ಕೆಲಸ ಮಾಡಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಕರೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಭದ್ರಾವತಿ ಘಟಕದ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಹಿಂದಿನ ಜಾನಪದ ಕಲೆ, ಸಂಸ್ಕೃತಿಯ ವೈಭವ ಉಳಿಸಿ ಬೆಳೆಸುವ ಕೆಲಸ ಇಂದಿನ ಅಗತ್ಯವಾಗಿದೆ. ರಾಮನಗರದಲ್ಲಿ ಜಾನಪದ ಸಾಹಿತ್ಯ ಲೋಕವನ್ನು ಅನಾವರಣಗೊಳಿಸಿದ್ದು ಅದನ್ನು ನಮ್ಮ ಬದುಕಿನಲ್ಲಿ ಒಮ್ಮೆ ನೋಡುವ ಮೂಲಕ ಅದನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಜಾನಪದ ಕಲೆ ಉಳಿಸುವ ಕೆಲಸವನ್ನು ಪರಿಷತ್ತು ಪ್ರತಿ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಮಾಡುತ್ತಿದ್ದು ಇದಕ್ಕೆ ಸಹಕಾರ ಅಗತ್ಯ’ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಪರಷತ್ತಿನ ಗೌರವಾಧ್ಯಕ್ಷ ಟಿ.ಜಿ. ಚಂದ್ರಪ್ಪ, ‘ನಮ್ಮ ಕಲೆ, ಸಂಸ್ಕೃತಿ ಉಳಿಸುವ ಕೆಲಸ ಇಂದಿನ ಅಗತ್ಯವಾಗಿದೆ. ಈಗಾಗಲೇ ಹಲವು ವರ್ಷಗಳಿಂದ ಜಾನಪದ ಕಲೆಯ ಚಟುವಟಿಕೆ ತಾಲ್ಲೂಕಿನಲ್ಲಿ ನಡೆದಿದ್ದು, ಅದರ ಮುಂದುವರಿಕೆಗೆ ಎಲ್ಲರೂ ಸಹಕರಿಸಿ’ ಎಂದರು.

ಅಧ್ಯಕ್ಷತೆಯನ್ನು ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೊಡ್ಲುಯಜ್ಞಯ್ಯ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಬಿ.ಕೆ. ಜಗನ್ನಾಥ, ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್. ಸುಧಾಮಣಿ, ಹೋಬಳಿ ಘಟಕದ ಅಧ್ಯಕ್ಷರಾದ ಗೊಂಧಿ ಜಯರಾಂ, ಸಿದ್ದೋಜಿರಾವ್, ಎಚ್.ಎಲ್. ಶಿವಕುಮಾರ್, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಮಹಿಳಾ ಸೇವಾ ಸಮಾಜ ಅಧ್ಯಕ್ಷ ಹೇಮಾವತಿ ವಿಶ್ವನಾಥರಾವ್ ಉಪಸ್ಥಿತರಿದ್ದರು.

ಶ್ರೀಧರೇಶ್ ತಂಡದವರಿಂದ ಪ್ರಾರ್ಥನೆ ನಡೆಯಿತು. ಅನ್ನಪೂರ್ಣ ಸತೀಶ್, ಮೋಹನ್ ನಿರೂಪಿಸಿದರು. ಹೇಮಾವತಿ ಸ್ವಾಗತಿಸಿದರು. ಸಭೆಯಲ್ಲಿ ಜಾನಪದ ಗೀತೆ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.