ADVERTISEMENT

ತುಮಕೂರಿಗೆ ಹೊರಟಿದ್ದ ರೈತರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:40 IST
Last Updated 2 ಜನವರಿ 2020, 14:40 IST
ಶಿವಮೊಗ್ಗ ಪೊಲೀಸರು ಗುರುವಾರ ತುಮಕೂರಿಗೆ ಹೊರಟಿದ್ದ ರೈತರನ್ನು ಬಂಧಿಸಿದರು.
ಶಿವಮೊಗ್ಗ ಪೊಲೀಸರು ಗುರುವಾರ ತುಮಕೂರಿಗೆ ಹೊರಟಿದ್ದ ರೈತರನ್ನು ಬಂಧಿಸಿದರು.   

ಶಿವಮೊಗ್ಗ: ತುಮಕೂರಿನಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿಕಪ್ಪು ಬಾವುಟ ಪ್ರದರ್ಶಿಸಲು ಹೊರಟಿದ್ದರೈತರನ್ನು ಪೊಲೀಸರು ಬೆಳಗಿನ ಜಾವ ರೈಲುನಿಲ್ದಾಣದಲ್ಲೇಬಂಧಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಎಸ್.ಬಸವರಾಜಪ್ಪ ಅವರ ನೇತೃತ್ವದಲ್ಲಿ25ಕ್ಕೂ ಹೆಚ್ಚು ರೈತರು ತುಮಕೂರಿಗೆ ಹೊರಟಿದ್ದರು. ಕೃಷಿ ಕ್ಷೇತ್ರಕ್ಕೆಸಮರ್ಪಕ ಯೋಜನೆ ರೂಪಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ತುಮಕೂರಿಗೆ ಹೊರಟಿದ್ದರು.

ಸಂಘದ ಜಿಲ್ಲಾಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಮುಖಂಡರಾದ ಪಿ.ಡಿ.ಮಂಜಪ್ಪ, ಗುರುಶಾಂತ, ಸಿ.ಚಂದ್ರಪ್ಪ, ಜಿ.ಪಂಚಾಕ್ಷರಿಮತ್ತಿತರರು ಬಂಧಿತರು. ನಂತರ ಅವರನ್ನು ಬಿಡುಗಡೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.