
ಪ್ರಜಾವಾಣಿ ವಾರ್ತೆ
ಸೊರಬ: ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದ ರಮೇಶ ಎಂಬುವರ ಮನೆಯಲ್ಲಿ ಬಂಗಾರ ಕಳವು ಮಾಡಿದ್ದ ಆರೋಪಿ ಚಂದ್ರಪ್ಪ ಅವರನ್ನು ಪಿಎಸ್‌ಐ ಪ್ರಶಾಂತಕುಮಾರ್ ನೇತೃತ್ವದಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು ಆರೋಪಿಯಿಂದ ₹ 96 ಸಾವಿರ ಮೌಲ್ಯದ 25 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 29ರಂದು ಛತ್ರದಹಳ್ಳಿ ಗ್ರಾಮದ ಆರೋಪಿ ಚಂದ್ರಪ್ಪ ಅದೇ ಗ್ರಾಮದ ರಮೇಶ ಎಂಬುವರ ಮನೆಯಲ್ಲಿ ಉಂಗುರ, ಕಿವಿ ಆಭರಣ ಹಾಗೂ ಸರ ಸೇರಿ ಒಟ್ಟು 25 ಗ್ರಾಂ ಚಿನ್ನವನ್ನು ಕಳವು ಮಾಡಿದ್ದ.
ಪಿಎಸ್‌ಐ ಪ್ರಶಾಂತಕುಮಾರ್, ಅಪರಾಧ ವಿಭಾಗದ ಸಲ್ಮಾನ್ ಖಾನ್ ಹಾಜಿ, ಸಿದ್ದನಗೌಡ, ಶಶಿಧರ, ಜಗದೀಶ್, ಸಂದೀಪ, ಸುಧಾಕರ್, ಪರಮೇಶ್ವರ ನಾಯಕ್ ತಂಡ ಆರೋಪಿಯನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.